Latest

ಋಷಿಕುಮಾರ ಸ್ವಾಮಿಜಿ ವಶಕ್ಕೆ ಪಡೆದ ಪೊಲೀಸರು

ಪ್ರಗತಿವಾಹಿನಿ ಸುದ್ದಿ; ಮಂಡ್ಯ: ಕೋಮುಸೌಹಾರ್ದತೆಗೆ ಧಕ್ಕೆಯುಂಟುಮಾಡುವ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನ ಕಾಳಿ ಮಠದ ಋಷಿಕುಮಾರಸ್ವಾಮಿಜಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಶ್ರೀರಂಗಪಟ್ಟಣದ ಮಸೀದಿಯನ್ನು ಬಾಬ್ರಿ ಮಸೀದಿ ರೀತಿಯಲ್ಲಿ ಕೆಡವಬೇಕು ಎಂದು ಋಷಿಕುಮಾರಸ್ವಾಮಿಜಿ ನಿನ್ನೆ ವಿವಾದಾತ್ಮಕ ವಿಡಿಯೋ ಬಿಡುಗಡೆ ಮಾಡಿದ್ದರು.

ಶ್ರೀರಂಗಪಟ್ಟಣದ ಮಸೀದಿ ಬಳಿ ನಿಂತು ವಿಡಿಯೋ ಮಾಡಿದ್ದ ಸ್ವಾಮೀಜಿ, ದೇವಾಲಯ ಕೆಡವಿ ಇಲ್ಲಿ ಮಸೀದಿ ನಿರ್ಮಿಸಿದ್ದಾರೆ. ಇದು ದೇವಾಲಯದ ಸ್ಥಳವಾಗಿತ್ತು. ಆದಷ್ಟು ಬೇಗ ಬಾಬ್ರಿ ಮಸೀದಿ ರೀತಿಯಲ್ಲಿ ಮಸೀದಿ ಕೆಡವ ಬೇಕು ಎಂದು ಕರೆ ನೀಡಿದ್ದರು. ಕೋಮುಸೌಹಾರ್ಧಕೆ ಧಕ್ಕೆಯುಂಟುಮಾಡಿದ ಆರೋಪ ಹಿನ್ನೆಲೆಯಲ್ಲಿ ಇದೀಗ ಶ್ರೀರಂಗಪಟ್ಟಣ ಠಾಣೆ ಪೊಲೀಸರು ಸ್ವಾಮೀಜಿಯನ್ನು ವಶಕ್ಕೆ ಪಡೆದಿದ್ದಾರೆ.
ಸಾಹಿತಿ ಚಂದ್ರಶೇಖರ ಕಂಬಾರ ಪತ್ನಿ ಸತ್ಯಭಾಮ ವಿಧಿವಶ

Related Articles

Back to top button