Latest

*ತರಬೇತಿಯಲ್ಲಿದ್ದಾಗಲೇ ಹೃದಯಾಘಾತ: ಬಾಗಲಕೋಟೆ ಮೂಲದ ಯೋಧ ಸಾವು*

ಪ್ರಗತಿವಾಹಿನಿ ಸುದ್ದಿ: ಸೈನ್ಯಕ್ಕೆ ಸೇರಿ ತರಬೇತಿ ಪಡೆಯುತ್ತಿದ್ದ ಬಾಗಲಕೋಟೆ ಮೂಲದ ಯೋಧರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಛತ್ತೀಸ್ ಗಢದಲ್ಲಿ ನಡೆದಿದೆ.

Home add -Advt

ಉಪೇಂದ್ರ ಸೋಮನಾಥ್ ರಾಥೋಡ್ (24) ಮೃತ ಯೋಧ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಚಿಂಚಲಕಟ್ಟಿ ತಾಂಡಾ ಗ್ರಾಮದವರು. ಛತ್ತೀಸ್ ಗಢದಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾಗ ತರಬೇತಿ ವೇಳೆ ಉಪೇಂದ್ರ ಸೋಮನಾಥ್ ಅವರಿಗೆ ಹೃದಯಾಘಾತವಾಗಿದೆ ಎಂದು ಎಂದು ತಿಳಿದುಬಂದಿದೆ.

ಪಾರ್ಥಿವ ಶರೀರ ಶುಕ್ರವಾರ ಮಧ್ಯಾಹ್ನ ತಾಲೂಕಿಗೆ ಬರಲಿದ್ದು, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ.


Related Articles

Back to top button