
ಪ್ರಗತಿವಾಹಿನಿ ಸುದ್ದಿ: ಕುಖ್ಯಾತ ರೌಡಿ ಬ್ಯಾಟರಿ ಜಯಂತ್ ನನ್ನು ಬೆಂಗಳೂರಿನ ದಾಬಸ್ ಪೇಟೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ರೌಡಿ ಜಯಂತ್ ನಿಂದ 3 ಬೈಕ್ ಸೇರಿದಂತೆ ಮೊಬೈಲ್ ಫೋನ್ ಗಳನ್ನು ಜಪ್ತಿ ಮಾಡಲಾಗಿದೆ. ಕೊಲೆ, ಕೊಲೆ ಯತ್ನ, ದರೋಡೆ ಸೇರಿದಂತೆ ಬ್ಯಾಟರಿ ಜಯಂತ್ 56 ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.
ಹಲವು ದಿನಗಳಿಂದ ತಲೆಮರೆಸಿಕೊಂಡಿದ್ದ ಬ್ಯಾಟರಿ ಜಯಂತ್ ನನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ದಾಬಸ್ ಪೇಟೆಯಲ್ಲಿಯೇ ಪೊಲೀಸರು ಬಂಧಿಸಿದ್ದಾರೆ.