
ಪ್ರಗತಿವಾಹಿನಿ ಸುದ್ದಿ: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಆಂಡ್ ಗ್ಯಾಂಗ್ ಜೈಲು ಸೇರಿದ್ದಾರೆ. ಆದರೆ ದರ್ಶನ್ ಮಾಡಿದ್ದು ಶೇಕಡಾ 100ರಷ್ಟು ಸರಿಯಾಗಿದೆ ಎಂದು ಬಿಗ್‌ಬಾಸ್ ಸ್ಪರ್ಧಿ ಸಮೀರ್ ಆಚಾರ್ಯ ಹೇಳಿದ್ದಾರೆ.
ಇದೀಗ ಸಮೀರ್ ಆಚಾರ್ಯ ಅವರು ದರ್ಶನ್ ಪರ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಪ್ರಕರಣದಲ್ಲಿ ದರ್ಶನ್ ಮಾಡಿದ ತಪ್ಪು ಅಷ್ಟೇ ಬೆಳಕಿಗೆ ಬರುತ್ತಿದೆ. ಆದರೆ ರೇಣುಕಾಸ್ವಾಮಿಯ ತಪ್ಪುಗಳನ್ನು ಯಾಕೆ ಮರೆಮಾಚಲಾಗುತ್ತಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ದೇಶದಲ್ಲಿ ಎಷ್ಟೊಂದು ಅಪರಾಧ ಕೃತ್ಯಗಳು ನಡೆದಿದೆ. ನಮ್ಮ ರಾಜ್ಯದಲ್ಲೇ ನಡೆದಿರುವ ಹಲವಾರು ಕೊಲೆ ಪ್ರಕರಣಗಳಿವೆ. ಆದರೆ ಅದಕ್ಕೆಲ್ಲಿ ನ್ಯಾಯ ದೊರಕಿದೆ. ಉದಾಹರಣೆಗೆ ಹುಬ್ಬಳ್ಳಿ ನೇಹಾ ಹಿರೇಮರ್ ಕೇಸ್‌ನಲ್ಲಿ ಸಂತ್ರಸ್ತೆಗೆ ಇನ್ನೂ ನ್ಯಾಯ ಸಿಕ್ಕಿಲ್ಲ. ಹೀಗಿರುವಾಗ ದರ್ಶನ್ ಒಬ್ಬರೇ ಕೊಲೆ ಮಾಡಿರುವ ಹಾಗೆ ಬಿಂಬಿಸುತ್ತಿದ್ದೀರಾ. ಅದು ಹೇಗೆ ತಪ್ಪು ಎಂದು ಹೇಳುತ್ತೀರಾ ಎಂದು ಆಚಾರ್ಯ ಅವರು ಕೇಳಿದ್ದಾರೆ.
ಈ ವಿಡಿಯೋವನ್ನು ನೋಡಿದ ಅನೇಕರು ಸಮೀರ್ ಆಚಾರ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನೀವು ಯಾವ ಕೋರ್ಟ್ ಜಡ್ಜ್ ಎಂದು ಪ್ರಶ್ನಿಸಿದ್ದಾರೆ. ಎಲ್ಲವೂ ಸರಿಯಾಗುತ್ತದೆ. ಅವರಿಗೆ ಗುರುದೆಸೆ ಬಂದಾಗ ಜೀವನದಲ್ಲಿ ಒಳ್ಳೆಯದಾಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.
ದರ್ಶನ್ ಅನೇಕರಿಗೆ ಹಲವಾರು ಸಹಾಯಗಳನ್ನು ಮಾಡಿದ್ದಾರೆ. ಅವರ ಈ ನಡೆಯಿಂದ ಇನ್ನು ಮುಂದೆ ಯಾರು ಹುಡುಗಿಯರನ್ನು ಈ ರೀತಿ ನಡೆಸಿಕೊಳ್ಳಬಾರದೆಂದು ಸಂದೇಶವನ್ನು ಕೊಟ್ಟಿದ್ದಾರೆ. ಈ ಭಯದಲ್ಲರೂ ಮುಂದೆ ಇಂತಹ ಕೃತ್ಯವನ್ನು ಯಾರು ಮಾಡಬಾರದುರ ಎಂದು ಆಚಾರ್ಯ ಅವರು ಹೇಳಿಕೊಂಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ