Kannada NewsKarnataka NewsLatest
ಸತೀಶ್ ಜಾರಕಿಹೊಳಿ ಲೋಕಸಭೆ ಪ್ರತಿನಿಧಿಸಲು ಸಮರ್ಥ ವ್ಯಕ್ತಿ – ಚನ್ನರಾಜ ಹಟ್ಟಿಹೊಳಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಏಪ್ರಿಲ್ 17ರಂದು ನಡೆಯಲಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಲೋಕಸಭೆಯನ್ನು ಪ್ರತಿನಿಧಿಸಲು ಅತ್ಯಂತ ಸಮರ್ಥ ವ್ಯಕ್ತಿಯಾಗಿದ್ದು, ಅವರನ್ನು ಆಯ್ಕೆ ಮಾಡಿದಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಾಂದಿ ಹಾಡಿದಂತಾಗಲಿದೆ ಎಂದು ಹರ್ಷಾ ಶುಗರ್ಸ್ ಚೇರಮನ್, ಕಾಂಗ್ರೆಸ್ ಮುಖಂಡ ಚನ್ನರಾಜ ಹಟ್ಟಿಹೊಳಿ ಹೇಳಿದರು.

ಈ ಬಾರಿ ಸತೀಶ್ ಜಾರಕಿಹೊಳಿ ಅವರನ್ನು ಅತ್ಯಧಿಕ ಬಹುಮತದಿಂದ ಆಯ್ಕೆ ಮಾಡಬೇಕೆಂದು ಕ್ಷೇತ್ರದ ಜನರು ತೀರ್ಮಾನಿಸಿದ್ದಾರೆ. ತನ್ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಚಾಲನೆ ಸಿಗಲಿದೆ. ಸತೀಶ್ ಜಾರಕಿಹೊಳಿಯಂತಹ ಸಂಸದರು ಸಿಗುವುದು ಕ್ಷೇತ್ರದ ಹಿತದೃಷ್ಟಿಯಿಂದ ಅಗತ್ಯವಾಗಿದೆ ಎಂದು ಚನ್ನರಾಜ ಹೇಳಿದರು.

ಈ ಸಂದರ್ಭದಲ್ಲಿ ತಾಲೂಕ್ ಪಂಚಾಯತ್ ಸದಸ್ಯ ನಿಲೇಶ್ ಚಂದಗಡ್ಕರ್, ವಿಠ್ಠಲ ಕುರುಬರ, ಮಾರುತಿ, ಚಂದ್ರಕಾಂತ, ರಾಮ ಬಾಗನ್ನವರ, ರವಿ, ಸಿದ್ದಪ್ಪ, ಬಾಳಪ್ಪ, ಶಹಬಾಜ್ ಹಾಗೂ ಮುಂತಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ