Latest

ಪ್ರಾಂಶುಪಾಲೆಗೂ ಅವನೆ ಗಂಡ, ಮೇಲ್ವಿಚಾರಕಿಗೂ ಆತನೆ ಪತಿ, ಶಿಕ್ಷಕಿಗೂ ಅವನೇ ಯಜಮಾನ, ವಿದ್ಯಾರ್ಥಿಯನ್ನೂ ಬಿಡದ ವ್ಯಕ್ತಿ

ಪ್ರಗತಿವಾಹಿನಿ ಸುದ್ದಿ; ಸೌದಿ ಅರೆಬಿಯಾ: ಒಂದು ಹೆಂಡತಿ-ಮಗುವನ್ನು ಚೆನ್ನಾಗಿ ನೋಡಿಕೊಂಡು ಸಾಕಿ-ಸಲಹುವುದು, ಸಂಸಾರ ನಿಭಾಯಿಸುವೇ ಕಷ್ಟ ಎನ್ನುವ ಈ ಕಾಲದಲ್ಲಿ ಇಲ್ಲೊಬ್ಬ ಭೂಪ ಒಂದಲ್ಲ, ಎರಡಲ್ಲ ಬರೋಬ್ಬರಿ ನಾಲ್ವರನ್ನು ಮದುವೆಯಾಗಿದ್ದಾನೆ. ಇನ್ನೂ ವಿಚಿತ್ರವೆಂದರೆ ಆ ನಾಲ್ವರೂ ಒಂದೇ ಶಾಲೆಯಲ್ಲಿದ್ದು, ಸುಖಿ ಸಂಸಾರವನ್ನೂ ನಡೆಸುತ್ತಿದ್ದಾನೆ.

ಇದೆಂಥಹ ಅಸಂಬದ್ಧ ಕಲ್ಪನೆ ಎನಿಸುತ್ತೆಯಾದರೂ ಸತ್ಯ ಸಂಗತಿ. ನೈಋತ್ಯ ಸೌದಿ ಅರೇಬಿಯಾದ ಜಿಜಾನ್ ನಲ್ಲಿ ವ್ಯಕ್ತಿಯೊಬ್ಬ ಜಿಜಾನ್ ಶಾಲೆಯಲ್ಲಿರುವ ನಾಲ್ವರನ್ನು ವಿವಾಹವಾಗಿದ್ದು, ಶಾಲೆಯ ಪ್ರಾಂಶುಪಾಲೆ, ಶಾಲೆಯ ಶಿಕ್ಷಕಿ, ಅದೇ ಶಾಲೆಯ ಮೇಲ್ವಿಚಾರಕಿ ಹಾಗೂ ಓರ್ವ ವಿದ್ಯಾರ್ಥಿನಿಯನ್ನೂ ವಿವಾಹವಾಗಿದ್ದಾನೆ.

ಈ ವ್ಯಕ್ತಿಯ ಕಿರಿಯ ಪತ್ನಿ ಮಾಧ್ಯಮಿಕ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ಅಂದರೆ ಶಾಲೆಯ ವಿದ್ಯಾರ್ಥಿನಿಯನ್ನೂ ವ್ಯಕ್ತಿ ಬಿಟ್ಟಿಲ್ಲ. ಅದೇ ವಿದ್ಯಾರ್ಥಿನಿಗೆ ಪಾಠ ಮಾಡುವ ಶಿಕ್ಷಕಿ ಕೂಡ ಆತನ ಹೆಂಡತಿ. ವಿದ್ಯಾರ್ಥಿನಿಗೂ ಆತನೇ ಗಂಡ, ಶಿಕ್ಷಕಿಗೂ ಅವನೇ ಪತಿ…ಅದೇ ಶಾಲೆಯ ಪ್ರಾಂಶುಪಾಲೆಗೂ ಅವನೇ ಯಜಮಾನ ಸಾಲದ್ದಕ್ಕೆ ಶಾಲೆ ಮೇಲ್ವಿಚಾರಕಿಯನ್ನೂ ಮದುವೆಯಾಗಿದ್ದಾನೆ ಮಹಾಶಯ.

ಈ ಬಗ್ಗೆ ಮಾತನಾಡಿರುವ ವ್ಯಕ್ತಿಯ ಪತ್ನಿ ಪ್ರಾಂಶುಪಾಲೆ, ನನ್ನ ಪತಿ ಇದೇ ಶಾಲೆಯ ಮೂವರನ್ನು ಮದುವೆಯಾಗಿದ್ದಾನೆ. ಆದರೆ ನನಗಾಗಲಿ, ಇತರ ಮೂವರಿಗಾಗಲಿ ಇದರಿಂದ ಯಾವುದೇ ಸಮಸ್ಯೆಯಾಗಿಲ್ಲ. ನಮ್ಮ ವೃತ್ತಿ ಜೀವನ, ಹುದ್ದೆಗೂ ಯಾವ ಧಕ್ಕೆಯಾಗಿಲ್ಲ ಎಂದು ಸಮರ್ಥಿಸಿಕೊಂಡಿದ್ದಾಳೆ.

Home add -Advt

ಒಂದೇ ಶಾಲೆಯ ನಾಲ್ವರನ್ನು ಮದುವೆಯಾಗಿರುವ ಈ ವಿಚಿತ್ರ ವಿವಾಹ ಸಂಬಂಧ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ನಡೆದಿದೆ.

ನಿಶ್ಚಿತಾರ್ಥದ ಬಳಿಕ ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button