Kannada NewsKarnataka NewsLatest

ಸವದತ್ತಿ ಯಲ್ಲಮ್ಮನ ಮಂಗಳಸೂತ್ರ ಹರಿದುಬಿದ್ದಿಲ್ಲ

https://youtu.be/efogZcG_x3s

ಪ್ರಗತಿವಾಹಿನಿ ಸುದ್ದಿ, ಉಗರಗೋಳ:  ಆದಿಶಕ್ತಿ ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮ ದೇವಿಯ ಮಂಗಳಸೂತ್ರ ಹರಿದು ಬಿದ್ದಿದೆ ಎಂದು ಕೆಲವರು ವದಂತಿ ಹಬ್ಬಿಸಿದ್ದಾರೆ. ಯಾರೂ ಅದನ್ನು ನಂಬಬಾರದು ಎಂದು ಯಲ್ಲಮ್ಮ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ ಹೇಳಿದ್ದಾರೆ.
ಇಡೀ ವಿಶ್ವವೇ ಕರೊನಾ ಮುಕ್ತವಾಗಲಿ. ಸರ್ವರ ಬಾಳು ಬೆಳಗಲಿ ಎಂದು ಪ್ರಾರ್ಥಿಸಿ ‘ಎಲ್ಲರ ಅಮ್ಮ’ ಯಲ್ಲಮ್ಮನಿಗೆ ನಿತ್ಯ ಬೆಳಗ್ಗೆ ಮತ್ತು ಸಂಜೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಆದರೆ, ಮಾನಸಿಕವಾಗಿ ಬಳಲುತ್ತಿರುವ ಕೆಲವರು ಯಲ್ಲಮ್ಮ ದೇವಿ ಮಂಗಳಸೂತ್ರ ಹರಿದಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸಂದೇಶ ಹರಿಬಿಟ್ಟಿದ್ದಾರೆ. ಇಂಥ ವದಂತಿಗಳಿಗೆ ಯಾರೂ ಕಿವಿಗೊಡಬಾರದು. ಭಕ್ತಿಯಿಂದ ಪ್ರಾರ್ಥಿಸಿ, ಯಲ್ಲಮ್ಮನ ಕೃಪೆಗೆ ಪಾತ್ರರಾಗಬೇಕು ಎಂದು ಕೋರಿದ್ದಾರೆ.
ಮಂಗಳವಾರ ರಾತ್ರಿಯಿಂದ ಇಂಥದ್ದೊಂದು ಸುಳ್ಳು ಸಂದೇಶ ಹರಿದಾಡಿದ್ದರಿಂದ ರಾಜ್ಯ ಹಾಗೂ ಹೊರರಾಜ್ಯಗಳ ಭಕ್ತರು ಆತಂಕಗೊಂಡಿದ್ದಾರೆ. ನನಗೆ ಹಾಗೂ ದೇವಸ್ಥಾನ ಸಿಬ್ಬಂದಿಗೆ ಕರೆ ಮಾಡಿ ವಿಚಾರಿಸುತ್ತಿದ್ದಾರೆ. ವಾಸ್ತವವಾಗಿ ಇಂಥ ಯಾವ ವಿದ್ಯಮಾನವೂ ನಡೆದಿಲ್ಲ.
 ಹಾಗಾಗಿ, ಭಕ್ತರು ಆತಂಕಕ್ಕೆ ಒಳಗಾಗಬಾರದು ಎಂದು ಕೋಟಾರಗಸ್ತಿ ಹೇಳಿದ್ದಾರೆ.

Home add -Advt

Related Articles

Back to top button