Karnataka News

*ಚಲಿಸುತ್ತಿದ್ದ ಕಾರಿನ ಸನ್ ರೂಫ್ ತೆಗೆದು ಯುವತಿಯರ ಮೇಲೆ ಮುತ್ತಿನ ಮಳೆಗರೆದ ಯುವಕ: ರೋಡ್ ರೋಮಿಯೋ ಹುಚ್ಚಾಟದ ವಿಡಿಯೋ ವೈರಲ್*

ಪ್ರಗತಿವಾಹಿನಿ ಸುದ್ದಿ: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಕೆಲ ಯುವಕ- ಯುವತಿ ರಾಜಾರೋಷವಾಗಿ ಅಸಭ್ಯವಾಗಿ ನಡೆದುಕೊಳ್ಳುತ್ತಿರುವ ಪ್ರಕರಣ ಹೆಚ್ಚುತ್ತಿದೆ. ಕೆಲ ದಿನಗಳ ಹಿಂದೆ ಬೆಂಗಳೂರು ಮೆಟ್ರೋ ನಿಲ್ದಾಣದಲ್ಲಿ ಯುವಕ-ಯುವತಿ ರೋಮ್ಯಾನ್ಸ್ ನಲ್ಲಿ ತೊಡಗಿದ್ದ ವಿಡಿಯೋ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಮುಂಬೈ ನಲ್ಲಿ ಬಸ್ ನಲ್ಲಿಯೇ ಜೋಡಿಯೊಂದು ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ವಿಡಿಯೋ ವೈರಲ್ ಆಗಿತ್ತು. ಇಂದಿನ ಯುವ ಜನತೆಯ ಕೆಲ ಸಭ್ಯತೆಯನ್ನು ಮೀರಿದ ದುರ್ವವರ್ತೆನೆ ಮರ್ಯಾದೆಯಿಂದ ಬದುಕುವ ಜನರು, ನಾಗರಿಕರು ತಲೆ ತಗ್ಗಿಸಿಯೇ ನಡೆಯಬೇಕಾದ ಸ್ಥಿತಿ ಎದುರಾಗಿದೆ.

ಇದೀಗ ಮಧ್ಯರಾತ್ರಿ ಯುವಕನೊಬ್ಬ ಕಾರಿನ ಸನ್ ರೂಫ್ ತೆಗೆದು ಯುವತಿಯರಿಗೆ ಚುಂಬಿಸಿ ರೋಡ್ ರೋಮಿಯೋನಂತೆ ಹುಚ್ಚಾಟ ಮೆರೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ದೃಶ್ಯ ಭಾರಿ ವೈರಲ್ ಆಗಿದೆ.

ಮೇ 26ರಂದು ಬೆಂಗಳೂರಿನ ಟ್ರಿನಿಟಿ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿನ ಸನ್ ರೂಫ್ ತೆಗೆದು ಯುವಕ ತನ್ನ ಜೊತೆಯಲ್ಲಿದ್ದ ಯುವತಿಯರಿಬ್ಬರನ್ನು ಚುಂಬಿಸಿ ಪುಂಡಾಟ ಮೆರೆದಿದ್ದಾನೆ. ಈ ದೃಶ್ಯ ಕಾರಿನ ಹಿಂದೆ ಬರುತ್ತಿದ್ದ ಬೈಕ್ ಸವಾರರ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಲತಾಣಗಳಲ್ಲಿ ವೈರಲ್ ಆಗಿದೆ. ಸಾರ್ವಜನಿಕವಾಗಿ ರಾಜಾರೋಷವಾಗಿ ನಡುರಸ್ತೆಯಲ್ಲಿ ಕಾರಿನಲ್ಲಿ ಇಂತಹ ವರ್ತನೆ ತೋರಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಪೊಲೀಸರಿಗೆ ಒತ್ತಾಯಿಸಿದ್ದಾರೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button