Latest

ವಿಧಾನಸಭೆ ಕಲಾಪ ನಾಳೆಗೆ ಮುಂದೂಡಿಕೆ

ವಿಧಾನಸಭೆ ಕಲಾಪ ನಾಳೆಗೆ ಮುಂದೂಡಿಕೆ

 

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –

ವಿಧಾನಸಭೆ ಕಲಾಪವನ್ನು ಶುಕ್ರ ಇಂದು ಇಡೀ ದಿನ ಗದ್ದಲದ ನಡುವೆ ಕಲಾಪಗಳು ವ್ಯರ್ಥವಾಗಿದ್ದು, ಸದನವನ್ನು ನಾಳೆಗೆ ಮುಂದೂಡಲಾಯಿತು.  ವಾರ ಬೆಳಗ್ಗೆ 11 ಗಂಟೆಗೆ ಮುಂದೂಡಲಾಗಿದೆ.

ಇಂದು ಇಡೀ ದಿನ ಗದ್ದಲದ ನಡುವೆ ಕಲಾಪಗಳು ವ್ಯರ್ಥವಾಗಿದ್ದು, ಸದನವನ್ನು ನಾಳೆಗೆ ಮುಂದೂಡಲಾಯಿತು.

ಆದರೆ ಭಾರತೀಯ ಜನತಾ ಪಾರ್ಟಿ ಅಹೋರಾತ್ರಿ ವಿಧಾನಸಭೆಯಲ್ಲೇ ಧರಣಿ ನಡೆಸಲು ನಿರ್ಧರಿಸಿದೆ.

ಇಂದು ಬೆಳಗ್ಗೆ ಸದನ ಆರಂಭವಾಗುತ್ತಿದ್ದಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸ ಮತ ಯಾಚನೆ ಮಂಡಿಸಿ ಮಾತನಾಡಲು ಆರಂಭಿಸಿದರು. ಆ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಎದ್ದು ನಿಂತು ಕ್ರಿಯಾಲೋಪ ಎತ್ತಿದರು.

ಬಂಡಾಯ ಶಾಸಕರು ಸದನಕ್ಕೆ ಜಾರಿಯಾಗುವುದು ಕಡ್ಡಾಯವಲ್ಲ ಎನ್ನುವ ಸುಪ್ರಿಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ವಿಪ್ ಗೆ ಏನು ಬೆಲೆ. ಅದರ ಮಹತ್ವ ಏನು ಎಂದು ಸ್ಪೀಕರ್ ರೂಲಿಂಗ್ ನೀಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

ಇದಕ್ಕೆ ಬಿಜೆಪಿ ತೀವ್ರವಾಗಿ ಆಕ್ಷೇಪಿಸಿ, ಇಂದು ಕೇವಲ ವಿಶ್ವಾಸ ಮತದ ಬಗ್ಗೆ ಚರ್ಚಿಸಬೇಕು ಎಂದು ಆಗ್ರಹಿಸಿತು. ಇದರಿಂದಾಗಿ ಬೆಳಗ್ಗೆ ಪೂರ್ತಿ ಗದ್ದಲವಾಗಿ, ಸ್ಪೀಕರ್ ಸಲಹೆ ಪಡೆಯಲು ಅಡ್ವೋಕೇಟ್ ಜನರಲ್ ನಲ್ಲಿ ಕರೆಸಿದರು.

ಮಧ್ಯಾಹ್ನ ಸಭೆ ಸೇರಿದಾಗ ಕಾಂಗ್ರೆಸ್ ಶಾಸಕ ಶ್ರೀಮಂತ ಪಾಟೀಲ ಅವರು ಮುಂಬೈ ಆಸ್ಪತ್ರೆಯಲ್ಲಿರುವ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ನ ಡಿ.ಕೆ.ಶಿವಕುಮಾರ, ಅವರನ್ನು ಬಿಜೆಪಿ ಅಪಹರಣ ಮಾಡಿದೆ ಎಂದು ದೂರಿದರು. ಈ ಸಂಬಂಧ ಫೋಟೋ ಮತ್ತು ವಿಮಾನ ಟಿಕೆಟ್ ದಾಖಲೆಗಳನ್ನು ಸ್ಪೀಕರ್ ಗೆ ಸಲ್ಲಿಸಿದರು.

ಸ್ಪೀಕರ್ ಕೂಡ ತಮಗೆ ಶ್ರೀಮಂತ ಪಾಟೀಲ ಹೆಸರಲ್ಲಿ ಪತ್ರ ಬಂದಿದ್ದು, ಅವರು ಅನಾರೋಗ್ಯದಿಂದ ಮುಂಬೈ ಆಸ್ಪತ್ರೆಗೆ ದಾಖಲಾಗಿದ್ದಾಗಿ ತಿಳಿಸಿದ್ದಾರೆ. ಆದರೆ ಪತ್ರಕ್ಕೆ ಸಹಿಯೂ ಇಲ್ಲ, ಲೆಟರ್ ಹೆಡ್ ನಲ್ಲಿ ಕೂಡ ಇಲ್ಲ ಎಂದರು. ಆದಾಗ್ಯೂ ಶ್ರೀಮಂತ ಪಾಟೀಲ ಅವರ ಕುಟುಂಬದವರನ್ನು ಸಂಪರ್ಕಿಸಿ ಮಾಹಿತಿ ಸಂಗ್ರಹಿಸುವಂತೆ ಗೃಹ ಸಚಿವರಿಗೆ ಸೂಚಿಸಿದರು.

ಈ ಮಧ್ಯೆ ಬಿಜೆಪಿ ರಾಜ್ಯಪಾಲರನ್ನು ಸಂಪರ್ಕಿಸಿ, ಸದನವನ್ನು ಅನಗತ್ಯವಾಗಿ ಹಾಳು ಮಾಡಲಾಗುತ್ತಿದೆ. ವಿಶ್ವಾಸಮತ ಯಾಚಿಸುವಂತೆ ನಿರ್ದೇಶನ ನೀಡಬೇಕೆಂದು ಕೋರಿತು. ರಾಜ್ಯಪಾಲರು ಇಂದು ರಾತ್ರಿಯೊಳಗೆ ವಿಶ್ವಾಸಮತ ಯಾಚಿಸುವಂತೆ ಸೂಚಿಸಿದರು.

ಈ ವಿಷಯದ ಕುರಿತು  ಸಹ ಸದಸನದಲ್ಲಿ ಭಾರೀ ಕೋಲಾಹಲ ಉಂಟಾಯಿತು. ಹಾಗಾಗಿ ಸದನವನ್ನು ನಾಳೆಗೆ ಮುಂದೂಡಲಾಯಿತು.

ಒಟ್ಟಾರೆ, ರಾಜ್ಯ ರಾಜಕೀಯ ಇನ್ನಷ್ಟು ನಾಟಕೀಯ ವಿದ್ಯಮಾನ ಹಾಗೂ ಆತಂಕಕಾರಿ ಬೆಳವಣಿಗೆಗಳಿಗೆ ಕಾರಣವಾಗುವ ಲಕ್ಷಣ ಕಾಣುತ್ತಿದೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button