ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: “ಶಬರಿಗಿರಿಯ ಅಯ್ಯಪ್ಪ ಸ್ವಾಮಿ ಪ್ರಭಾವಿಶಾಲಿ ದೈವವಾಗಿದ್ದು, ಭಕ್ತರು ಇವತ್ತು ದೇಶಾದ್ಯಂತ ಮಹಾಪೂಜೆಗಳನ್ನು ಕೈಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾಗುತ್ತಿದ್ದಾರೆ. ಮಹಿಷಿ ಸಂಹಾರಕ್ಕಾಗಿ ಧರ್ಮಶಾಸ್ತನಾಗಿ ಅವತರಿಸಿದ ಹರಿಹರಸುತನು ಶಬರಿಗಿರಿಯಲ್ಲಿ ಅಯ್ಯಪ್ಪನಾಗಿ ಪೂಜೆ ಸ್ವೀಕರಿಸಿ, ಭಕ್ತರ ಕಷ್ಟಕಾರ್ಪಣ್ಯಗಳನ್ನು ಪರಿಹರಿಸುತ್ತಾನೆ,” ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ಅವರು, ಮೊದಗಾ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಶಬರಿಮಲೈ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆಯಲ್ಲಿ ಭಾಗಿಯಾಗಿ ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸಿ, ಆಶೀರ್ವಾದ ಪಡೆದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
“ಶಬರಿಮಲೈ ಅಯ್ಯಪ್ಪನನ್ನು ಆರಾಧಿಸಲು ಭಕ್ತರ ಭಕ್ತಿಯೇ ಪ್ರಧಾನವಾದುದು. ಶ್ರೀ ಅಯ್ಯಪ್ಪನನ್ನು ಪೂಜಿಸಲು ಕೋಟ್ಯಾಂತರ ಭಕ್ತಾಧಿಗಳು ಅಯ್ಯಪ್ಪ ಸ್ವಾಮಿಯ ಮಾಲೆಯನ್ನು ಧರಿಸುತ್ತಿರುವುದು ಶಾಸ್ತ್ರಾರನ ಶಕ್ತಿಗೆ ಸಾಕ್ಷಿ,” ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಬಸವರಾಜ ಕಲ್ಲೂರ, ಉಮೇಶ ದಾನೋಜಿ ಮಂಜು ತುಕ್ಕಾರ, ಪಾಂಡು ಬಡಗಾವಿ, ಸಿದ್ದಪ್ಪ ಭಾತ್ಕಂಡೆ, ಶಿವಾನಂದ ರಾಜಗೋಳಿ, ಸಂಭಾಜಿ ಕಾಳೆ, ಯೂನಿಸ್ ಭಾಗವಾನ, ಚೇತನ ಮಾರಿಹಾಳ, ಸುಧೀರ್ ಮುಗಳಿ, ಬಸವಂತ ಕಾಳೋಜಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.
“ನಾನು ಅವನಿಗಾಗಿ ಶೋಕವನ್ನು ನಿಲ್ಲಿಸಿದ್ದೇನೆ,”: ಅಗಲಿದ ಪತಿಗಾಗಿ ವಿಕ್ರಮ್ ಕಿರ್ಲೋಸ್ಕರ್ ಪತ್ನಿ ಟಿಪ್ಪಣಿ
https://pragati.taskdun.com/i-have-stopped-mourning-for-him-vikram-kirloskars-wife-notes-for-departed-husband/
ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಆರ್ಥಿಕ ನೆರವಿನ ಚೆಕ್ ವಿತರಣೆ
https://pragati.taskdun.com/distribution-of-financial-assistance-checks-to-those-suffering-from-various-diseases/
*ಭೀಕರ ರಸ್ತೆ ಅಪಘಾತ; ಹೆಲ್ತ್ ಇನ್ಸ್ ಪೆಕ್ಟರ್ ಸ್ಥಳದಲ್ಲೇ ದುರ್ಮರಣ*
https://pragati.taskdun.com/bike-accidentbbmp-health-inspectoredeath/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ