Latest

ಸ್ವಾಮೀಜಿಗಳು ತಲೆಯ ಮೇಲೆ ಖಾವಿ ಬಟ್ಟೆ ಹಾಕಿಕೊಳ್ಳುತ್ತಾರೆ; ಅದನ್ನೂ ಪ್ರಶ್ನೆ ಮಾಡ್ತೀರಾ?; ಸಿದ್ದರಾಮಯ್ಯ ಪ್ರಶ್ನೆ

ಪ್ರಗತಿವಾಹಿನಿ ಸುದ್ದಿ; ಮೈಸೂರು: ಬಿಜೆಪಿಯವರು ವಿವಾದಗಳನ್ನು ಸೃಷ್ಟಿಸಿ ಮತ ಕ್ರೂಢಿಕರಣಕ್ಕೆ ಯತ್ನಿಸುತ್ತಿದ್ದಾರೆ. ಧ್ವೇಷದ ರಾಜಕಾರಣ ನಮ್ಮ ದೇಶದಲ್ಲಿ ನಡೆಯುವುದಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಮುಸ್ಲೀಂ ವ್ಯಾಪಾರಿಗಳಿಗೆ ನಿರ್ಬಂಧ ಹಾಕಿರುವುದು ಸರಿಯಲ್ಲ. ಹಿಂದೂ ದೇವಾಲಯಗಳ ಬಳಿ ಮುಸ್ಲೀಂ ವ್ಯಾಪಾರಿಗಳಿಗೆ ನಿಷೇಧ ಹೇರಿರುವುದರ ಹಿಂದೆ ಬಿಜೆಪಿ ಅಜೆಂಡಾ ಇದೆ. ರಾಜ್ಯದಲ್ಲಿ ಹಿಜಾಬ್ ವಿವಾದ ಸೃಷ್ಟಿಸಿದ್ದು ಬಿಜೆಪಿಯವರು. ಮುಸ್ಲಿಂ ಹೆಣ್ಣುಮಕ್ಕಳು ತಲೆ ಮೇಲೆ ದುಪ್ಪಟ್ಟಾ ಹಾಕಿದರೆ ತಪ್ಪೇನು? ಹಿಂದೂ ಹೆಣ್ಣುಮಕ್ಕಳು ತಲೆ ಮೇಲೆ ದುಪ್ಪಟ್ಟಾ ಹಾಕುತ್ತಾರೆ, ಸ್ವಾಮೀಜಿಗಳು ತಲೆಯ ಮೇಲೆ ಖಾವಿ ಬಟ್ಟೆ ಹಾಕಿಕೊಳ್ಳುತ್ತಾರೆ ಅದನ್ನೆಲ್ಲಾ ನೀವು ಪ್ರಶ್ನೆ ಮಾಡ್ತೀರಾ? ಹೀಗೆಲ್ಲಾ ವಿವಾದ ಸೃಷ್ಟಿಸಿ ಅರಗಿಸಿಕೊಳ್ಳಬಹುದು ಎಂದು ಬಿಜೆಪಿ ತಿಳಿದಿದೆ. ಬಿಜೆಪಿ ತಂತ್ರ ರಾಜ್ಯದ ಜನತೆಗೆ ಅರ್ಥವಾಗುತ್ತೆ ಎಂದು ಕಿಡಿಕಾರಿದರು.

Home add -Advt

ಸರ್ಕಾರ ಪರಿಹಾರ ನೀಡುವುದರಲ್ಲಿಯೂ ತಾರತಮ್ಯ ಮಾಡುತ್ತಿದೆ. ಸಂಘ ಪರುವಾರದವರು ಅಲ್ಪಸಂಖ್ಯಾತರನ್ನು ಕೊಲೆ ಮಾಡಿದರೆ ಮೃತ ಅಲ್ಪಸಂಖ್ಯಾತ ಕುಟುಂಬಕ್ಕೆ ಕಡಿಮೆ ಪರಿಹಾರ, ಮುಸ್ಲಿಂರು ಹಿಂದೂಗಳನ್ನು ಕೊಲೆ ಮಾಡಿದರೆ ಮೃತ ಹಿಂದೂಗಳಿಗೆ ಹೆಚ್ಚಿನ ಪರಿಹಾರ. ಹರ್ಷ ಕುಟುಂಬಕ್ಕೆ 25 ಲಕ್ಷ ಪರಿಹಾರ ಕೊಟ್ಟಿದ್ದಾರೆ. ಕರಾವಳಿಯ ದಿನೇಶ್ ಕುಟುಂಬಕ್ಕೆ ಪರಿಹಾರ ಕೊಟ್ರಾ? ಪರಿಹಾರ ಇವರ ಅಪ್ಪನ ಮನೆಯಿಂದ ಕೊಡುತ್ತಾರಾ? ಸಾರ್ವಜನಿಕರು ಬೆವರು ಸುರಿಸಿ ದುಡಿದು ಕಟ್ತಿರುವ ತೆರಿಗೆ ಹಣ. ಜನರಿಗೆ ಮಕ್ಮಲ್ ಟೋಪಿ ಹಾಕಬಹುದು ಎಂದು ಬಿಜೆಪಿ ತಿಳಿದಿದೆ. ರಾಜ್ಯದ ಜರಿಗೆ ಬಿಜೆಪಿ ತಂತ್ರ ಅರ್ಥವಾಗುತ್ತೆ ಎಂದರು.

ದ್ವೇಷದರಾಜಕಾರಣ ಮಾಡಿ ಮತ ಕ್ರೂಢಿಕರಿಸಲು ಹೊರಟಿರುವ ಬಿಜೆಪಿಯ ಲೆಕ್ಕಾಚಾರ ಉಲ್ಟಾಗಲಿದೆ. ವಿವಾದ ಸೃಷ್ಟಿಸಿ ಭಾವನಾತ್ಮಕ ವಿಚಾರಗಳ ಮೇಲೆ ರಾಜಕೀಯ ಮಾಡುತ್ತಾ ಹೋದರೆ ಬಿಜೆಪಿ ಇಕ್ಕಟ್ಟಿಗೆ ಸಿಲುಕಲಿದೆ ಎಂದು ಹೇಳಿದರು.

ಬಿಜೆಪಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಮಾಜಿ ಸಚಿವ

Related Articles

Back to top button