Latest

ಕಾರು ಅಪಘಾತ; ಮಾಜಿ ಸಚಿವ ಬಾಬುರಾವ ಚಿಂಚನಸೂರ್ ಗೆ ಗಂಭೀರ ಗಾಯ

ಪ್ರಗತಿವಾಹಿನಿ ಸುದ್ದಿ, ಯಾದಗಿರಿ: ಗುರುಮಠಕಲ್‌ ಕ್ಷೇತ್ರದ‌ ಕಾಂಗ್ರೆಸ್ ಅಭ್ಯರ್ಥಿ,ಯಾಗಿ ಇಂದು ನಾಮಪತ್ರ ಸಲ್ಲಿಕೆಗೆ ಅಣಿಯಾಗಿದ್ದ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಅವರ ಕಾರು ಶುಕ್ರವಾರ ತಡರಾತ್ರಿ ಅಪಘಾತಕ್ಕೀಡಾಗಿದ್ದು ಚಿಂಚನಸೂರ್ ಗಂಭೀರ ಗಾಯಗೊಂಡಿದ್ದಾರೆ.

ಯಾದಗಿರಿ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿ ಚಿಂಚನಸೂರ್ ಅವರು ಯಾದಗಿರಿಯಿಂದ ಕಲಬುರಗಿಗೆ ಹೋಗುವಾಗ ಕಲಬುರಗಿಯ ಆಕಾಶವಾಣಿ ಕೇಂದ್ರದ ಬಳಿ ರಾತ್ರಿ 12:30ರ ಸುಮಾರಿಗೆ ಘಟನೆ ನಡೆದಿದೆ. ರಸ್ತೆಯ ಮಧ್ಯೆ ಇರುವ ಗುಂಡಿಗೆ ಕಾರಿನ ಟೈರ್ ಇಳಿದಾಗ ವಾಹನ ಸ್ಕೀಡ್ ಆಗಿದೆ. ಚಾಲಕ ನಿದ್ದೆಯ ಮಂಪರಿನಲ್ಲಿದ್ದ ಎನ್ನಲಾಗಿದೆ. ಅಪಘಾತದಲ್ಲಿ ಚಿಂಚನಸೂರ್ ಅವರ ಕಾಲು ಹಾಗೂ ಮುಖಕ್ಕೆ ತೀವ್ರ ಪೆಟ್ಟು ತಗುಲಿದೆ.

Home add -Advt

ಸ್ಥಳೀಯರ ನೆರವಿನಿಂದ ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ ಅವರನ್ನು ದಾಖಲಿಸಿದ್ದು ಅವರಿಗೆ ಶಸ್ತ್ರಚಿಕಿತ್ಸೆಗೆ ಗುರಿಪಡಿಸಲಾಗುತ್ತಿದೆ. ಚಾಲಕ ಮತ್ತು ಗನ್‌ಮ್ಯಾನ್‌ ಸುರಕ್ಷಿತವಾಗಿದ್ದಾರೆ.

https://pragati.taskdun.com/power-supply-disruption-in-many-places-tomorrow/
https://pragati.taskdun.com/posing-as-a-woman-and-threatening-to-take-nude-pictures-in-the-gym/

https://pragati.taskdun.com/13th-all-karnataka-gamaka-kala-sammelna-at-belagavi-on-16th-and-17th/

Related Articles

Back to top button