Latest

ಬೆಳಗಾವಿ ಜಿಲ್ಲೆ ಸಾಂಸ್ಕೃತಿಕ ವೈವಿಧ್ಯತೆ ಗ್ರಂಥ ಲೋಕಾರ್ಪಣೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಡಾ. ರಾಜಶೇಖರ ಇಚ್ಚಂಗಿ ಬೆಳಗಾವಿ ಜಿಲ್ಲೆಯ ಸಾಂಸ್ಕೃತಿಕ ಸಾಹಿತ್ಯಿಕ ರಾಯಭಾರಿ. ಅವರ ಎಲ್ಲ ಕೃತಿಗಳು ಸಮಾಜದ ಪ್ರತಿಬಿಂಬಗಳಾಗಿ ಲೋಕಕ್ಕೆ ದಿವ್ಯ ಸಂದೇಶವನ್ನು ನೀಡಿವೆ ಎಂದು ಡಾ.ಗುರುದೇವಿ ಹುಲ್ಲೆಪನವರಮಠ ವಿವರಿಸಿದರು.

ತನ್ಮಯ ಚಿಂತನ ಚಾವಡಿ ಬೆಳಗಾವಿ ಹಾಗೂ ಮಹೇಶ ಪಿ.ಯ. ಕಾಲೇಜಿನಲ್ಲಿ ಡಾ.ರಾಜಶೇಖರ ಇಚ್ಚಂಗಿ ಅವರ ಬೆಳಗಾವಿ ಜಿಲ್ಲೆ ಸಾಂಸ್ಕೃತಿಕ ವೈವಿಧ್ಯತೆ ಗ್ರಂಥ ಲೋಕಾರ್ಪಣೆ ಮಾಡಿ ಮಾತನಾಡಿದರು.

ಗ್ರಂಥ ಪರಿಚಯವನ್ನು ಡಾ.ಪಿ..ಜಿ. ಕೆಂಪಣ್ಣವರ ಪರಿಚಯಿಸಿ ಚಿಕ್ಕಬಾಗೇವಾಡಿ, ಕಾದ್ರೊಳ್ಳಿ, ವಿವಿಧ ಶಾಸನಗಳ ಬಗ್ಗೆ ಈ ಕೃತಿಯಲ್ಲಿ ಮಾಹಿತಿ ನೀಡಲಾಗಿದೆ ಎಂದರು.

ಮುಖ್ಯ ಅತಿಥಿ ಎಂ.ವಿ. ಭಟ್ ಮಾತನಾಡಿ, ನೈತಿಕತೆಯ ಚೌಕಟ್ಟಿಲ್ಲದ ಸಾಂಸ್ಕೃತಿ ಅರ್ಥಹೀನ ಎಂದರು. ಸಾಹಿತಿ ಗುರುಪಾದ ಮರಿಗುದ್ದಿ ಮಾತನಾಡಿ, ಅರ್ಜುನವಾಡಿ ಶಿಲಾಶಾಸನ ಅತಿ ಪ್ರಸಿದ್ಧ ರಾಜ ಪುರಹಿತರು ಕಂಡುಹಿಡಿದರು ಎಂದು ವಿವರಿಸಿದರು.

Home add -Advt

ಅಧ್ಯಕ್ಷತೆ ವಹಿಸಿದ್ದ ಪ್ರೊಫೆಸರ್ ಎಲ್. ವಿ.ಪಾಟೀಲ ಮಾತನಾಡಿ, ಬೆಳಗಾವಿ ರಾಜ್ಯದಲ್ಲಿ ಅತಿ ದೊಡ್ಡ ಜಿಲ್ಲೆ ಇನ್ನೂ ಸಂಶೋಧನೆಗಳು ನಡೆಯಬೇಕು ಸಮಗ್ರ ವಾದ ಬೆಳಗಾವಿ ನಾಡಿನಲ್ಲಿ ಸಾಹಿತಿಗಳು ವಿದ್ವಾಂಸರು ತಮ್ಮದೇ ಆದ ಸಾಯಿತಿಕ ಕೊಡುಗೆ ಕೊಟ್ಟ ನಾಡು ಎಂದರು.ಎ ಡಿ ಇಟಗಿ ಬಿ ಬಿ ಮಠಪತಿ ಬಸವರಾಜ ಗಾಗಿ೯ ಪ್ರಕಾಶ ಹುಕ್ಕೇರಿ ಡಾ ಭಾರತಿ ಮಠದ ಕಮಲಾ ಗಣಾಚಾರಿ ಬಿ ಬಿ ಮಲಾಬಾದಿ ಎ ಬಿ ಘಾಟಗೆ ಆರ್ ಬಿ ಬನಶಂಕರಿ ಎಂ ಬಿ ಮರಲ್ಲಕ್ಕನ್ನವರಬಸವರಾಜ ಗಾಗಿ೯ ಕಮಲಾ ಗಣಾಚಾರಿ ಪ್ರಕಾಶ ಗಿರಿಮಲ್ಲನ್ನವರ ಆರ್ ಬಿ ಬನಶಂಕರಿ ಡಾಭಾರತಿ ಮಠದ ಬಾಳಗೌಡ ದೊಡಬಂಗಿ ಸುನಿಲ ಸಾಣಿ ಕೊಪ್ಪ ಡಾ ಎ ಡಿ ಇಟಗಿ ಎಂ ಬಿ ಮರಲ್ಲಕನ್ನವರ ಎ ಎ ಸನದಿ ಎಸ್ಎಸ್ ಪಾಟೀಲ ಪ್ರಕಾಶಅವಲಕ್ಕಿ ಬಿ ಜಗದೀಶ ಇತರರು ಉಪಸ್ಥಿತರಿದ್ಧರು

ಪ್ರಾರಂಭದಲ್ಲಿ ಬಿ.ಬಿ. ದೇಸಾಯಿ ಪ್ರಾರ್ಥಿಸಿದರು. ಮೋಹನ ಗೌಡ ಪಾಟೀಲ ಸ್ವಾಗತಿಸಿದರು.ಸ.ರಾ. ಸುಳಕೂಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ವೈ.ಮೆಣಸಿನಕಾಯಿ ನಿರೂಪಿಸಿದರು.

Related Articles

Back to top button