Uncategorized

ಅಂದರ್ ಬಾಹರ್ ಅಡ್ಡೆ ಮೇಲೆ ಮಾರುಕಟ್ಟೆ ಪೊಲೀಸರ ದಾಳಿ; 8 ಜನರ ಬಂಧನ

ಪ್ರಗತಿವಾಹಿನಿ ಸುದ್ದಿ; ಶಿರಸಿ: ಅಕ್ರಮವಾಗಿ ಅಂದರ್ ಬಾಹರ್ ಆಡುತ್ತಿದ್ದ ತಂಡದ ಮೇಲೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಶಿರಸಿ ಹೊಸಮಾರುಕಟ್ಟೆ ಪೊಲೀಸರು ಎಂಟು ಜನರನ್ನು ಬಂಧಿಸಿ ನಗದು ಹಣವನ್ನು, ಮೊಬೈಲ್ ಗಳನ್ನು ವಶಪಡಿಸಿಕೊಂಡ ಘಟನೆ ನಗರದ ಕೆ.ಎಚ್.ಬಿ ಕಾಲೋನಿ ನಡೆದಿದೆ.

ನಗರದ ಕೆ.ಎಚ್.ಬಿ ಕಾಲೋನಿ ೪ ನೇ ಕ್ರಾಸ್‌ನಲ್ಲಿರುವ ಬುಡೇನ್ ಸಾಬ್ ಇವರ ಮನೆಯ ಒಳಗೆ ಅಂದರ್ ಬಾಹರ್ ಜುಗಾರಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ.

ಬುಡೇನ್ ಸಾಬ್ ಗರೀಬ್ ಸಾಬ್ ಗಾಣಗ ೬೦ ವರ್ಷ, ಗೌಸ್ ಮೊಹಿದ್ದಿನ್ ಮಹಮ್ಮದ್ ಸ್ಮಾಯಿಲ್ ಕೆಂಚರಗಟ್ಟಿ ೩೨ ವರ್ಷ, ಮಹಮ್ಮದ್ ಕಾಸಿಮ್ ನೂರಅಹಮ್ಮದ್ ತಿಮ್ಮಾಪುರ ೩೨ ವರ್ಷ, ಶಾಬಾಜ್ ರೆಹಮುತ್ತಲ್ಲಾ ಶೇಖ್ ೨೭ ವರ್ಷ, ಜಾಫರ ಅಬ್ದುಲ್ ಸತ್ತಾರ ಶೇಖ್ ೨೭, ಜಾವೀದ ಇಸಾಕ ಶೇಖ್ ೨೮ ವರ್ಷ, ಮಾರುತಿ ರಾಮ ನಾಯ್ಕ ಪ್ರಾಯ: ೪೭ ವರ್ಷ, ಸಲ್ಮಾನ್ ಇನಾಯತ್ ಶೇಖ್ ೨೫ ವರ್ಷ ಎಂಬುವರೇ ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತ ಆರೋಪಿಗಳಿಂದ ಆರು ಮೊಬೈಲ್ ಗಳನ್ನು ೧೦೨೦೦ ರೂ ನಗದು ಹಣವನ್ನು ಹಾಗೂ ಅಂದರ್ ಬಾಹರ್ ಆಟಕ್ಕೆ ಬಳಸಲಾದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಈ ಕಾರ್ಯಚರಣೆಯು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ವಿಷ್ಣುವರ್ಧನ್, ಹೆಚ್ಚುವರಿ ವರಿಷ್ಠಾಧಿಕಾರಿ ಜಿ.ಟಿ.ಜಯಕುಮಾರ್, ಡಿ.ಎಸ್.ಪಿ ಗಣೇಶ ಕೆ.ಎಲ್. ಇವರ ಮಾರ್ಗದರ್ಶನ ದಲ್ಲಿ ಸಿ.ಪಿ.ಐ. ರಾಮಚಂದ್ರ ನಾಯಕ ರವರ ನೇತೃತ್ವದಲ್ಲಿ, ಮಾರುಕಟ್ಟೆ ಪಿ.ಎಸ್.ಐ. ಭೀಮಾಶಂಕರ ಸಿನ್ನೂರ ಸಂಗಣ್ಣ, ಸಿಬ್ಬಂದಿಯವರಾದ ಮೋಹನ ನಾಯ್ಕ , ಹನುಮಂತ ಮಾಕಾಪುರ, ವೃತ್ತ ಕಛೇರಿಯ ಸಿಬ್ಬಂದಿ ಮಹಾದೇವ ನೀರೊಳ್ಳಿ, ರಾಜು ಸಾಲಗಾವಿ , ಶಿರಸಿ ನಗರ ಠಾಣೆಯ ಸಿಬ್ಬಂದಿ ಪ್ರಶಾಂತ ಪಾವಸ್ಕರ್, ಪಾಂಡುರಂಗ ನಾಗೋಜಿ ಇವರು ಭಾಗವಹಿಸಿ ಸ್ವತ್ತು ಹಾಗೂ ಆರೋಪಿತರನ್ನು ವಶಕ್ಕೆ ಪಡೆಯಲು ಸಹಕರಿಸಿರುತ್ತಾರೆ. ಈ ಕಾರ್ಯಚರಣೆಯ ಬಗ್ಗೆ ಪೊಲೀಸ ಅಧೀಕ್ಷಕರು ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button