Kannada NewsKarnataka NewsLatest
ಅನಾರೋಗ್ಯದಿಂದ ಯೋಧ ಸಾವು : ಇಂದು ಅಂತ್ಯಸಂಸ್ಕಾರ

ಪ್ರಗತಿವಾಹಿನಿ ಸುದ್ದಿ : ರಾಜಸ್ಥಾನದ ಜೋಧಪುರ ಬೆಟಾಲಿಯನ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಯೋಧ ಹನುಮಂತ ತಳವಾರ ನಿಧನರಾಗಿದ್ದಾರೆ. ಅವರಿಗೆ 32 ವರ್ಷ ವಯಸ್ಸಾಗಿತ್ತು.
ಬಾಗಲಕೋಟೆ ಜಿಲ್ಲೆಯ ಖಜ್ಜಿಡೋಣಿಯ ಹನುಮಂತ ತಳವಾರ 2011ರಲ್ಲಿ ಸೇನೆ ಸೇರಿದ್ದರು. ಆದರೆ ತೀವ್ರ ಉಸಿರಾಟದ ತೊಂದರಿಯಿಂದ ಮೃತಪಟ್ಟಿದ್ದಾರೆ.
ಸೋಮವಾರ ಸಂಜೆ ಅವರ ಅಂತ್ಯಸಂಸ್ಕಾರ ನಡೆಯುವ ಸಾಧ್ಯತೆ ಇದೆ. ಯೋಧನ ನಿಧನದಿಂದಾಗಿ ಇಡೀ ಗ್ರಾಮ ಶೋಕ ಸಾಗರದಲ್ಲಿ ಮುಳುಗಿದೆ.




