Latest

*ತಂದೆ ಸಾವಿನಿಂದ ನೊಂದ ಮಗ ಆತ್ಮಹತ್ಯೆ*

ಪ್ರಗತಿವಾಹಿನಿ ಸುದ್ದಿ: ತಂದೆ ಸಾವಿನಿಂದ ಮನನೊಂದಿದ್ದ ಮಗನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಚೀಲಾಪುರ ಗ್ರಾಮದಲ್ಲಿ ನಡೆದಿದೆ.

Related Articles

32 ವರ್ಷದ ಶಿವಕುಮಾರ್ ಆತ್ಮಹತ್ಯೆಗೆ ಶರಣಾದ ಮಗ. 65 ವರ್ಷದ ತಂದೆ ಚಂದ್ರ ನಾಯ್ಕ್ ಮೃತಪಟ್ಟಿದ್ದರು, ತಂದೆಯ ಅಗಲಿಕೆಯಿಂದ ತೀವ್ರವಾಗಿ ಮನನೊಂದಿದ್ದ ಶಿವಕುಮಾರ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಶಿವಕುಮಾರ್ ದಿವ್ಯಾಂಗನಾಗಿದ್ದ. ಹಾಗಾಗಿ ತಂದೆಯೇ ಆಸರೆಯಾಗಿದ್ದರು. ಆದರೆ ಕೆಲ ದಿನಗಳ ಹಿಂದೆ ತಂದೆ ಚಮ್ದ್ರ ನಾಯ್ಕ್ ಸಾವನ್ನಪ್ಪಿದ್ದರು. ಇದರಿಂದ ಕಂಗೆಟ್ಟಿದ್ದ ಶಿವಕುಮಾರ್ ಇದೀಗ ವಿಷ ಸೇವಿಸಿ ತಾನೂ ಸಾವಿನ ಹಾದಿ ಹಿಡಿದಿದ್ದಾನೆ.

ಹೊನ್ನಾಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button