Kannada NewsKarnataka News

ಹಿಂಡಲಗಾ ಗಣಪತಿ, ಸುಳೇಬಾವಿ ಮಹಾಲಕ್ಷ್ಮೀಗೆ ವಿಶೇಷ ಪೂಜೆ; ಯುಗಾದಿಯ ದಿನವೇ ಚುನಾವಣೆ ಪ್ರಚಾರ ಆರಂಭಿಸಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹಿಂಡಲಗಾ ಗಣಪತಿ ಮಂದಿರ​ ಮತ್ತು​​ಸುಳೇಭಾವಿಯ ಆದಿಶಕ್ತಿ ಶ್ರೀ ಮಹಾಲಕ್ಷ್ಮಿ ದೇವಿ​ಗೆ ಪೂಜೆ ಸಲ್ಲಿಸುವ ಮೂಲಕ ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳಕರ್ ಅವರು ಯುಗಾದಿಯ ದಿನ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಿದರು.

Home add -Advt

 ಬುಧವಾರ ಬೆಳಗ್ಗೆ ಹಿಂಡಲಗಾ ಗಣಪತಿ ಗುಡಿಗೆ ತೆರಳಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ಪಕ್ಷದ ಮುಖಂಡರು, ವಿಘ್ನ ವಿನಾಯಕನಿಗೆ ಪೂಜೆ ಸಲ್ಲಿಸಿದರು. ಪ್ರಚಾರ ಕಾರ್ಯ ಮತ್ತು ಚುನಾವಣೆಗಳು ನಿರ್ವಿಘ್ನವಾಗಿ ನಡೆಯಲಿ, ಸರ್ವರಿಗೂ ಒಳಿತಾಗಲಿ ಎಂದು ಪ್ರಾರ್ಥಿಸಿದರು.  

​​ನಂತರ​​ಸುಳೇಭಾವಿಯ ಆದಿಶಕ್ತಿ ಶ್ರೀ ಮಹಾಲಕ್ಷ್ಮಿ ದೇವಿಯ ಸನ್ನಿಧಿಗೆ ತೆರಳಿ,​ ವಿಶೇಷ ಪೂಜೆ ಸಲ್ಲಿಸಿದರು. ವಿಶೇಷವಾಗಿ ವಿನ್ಯಾಸಗೊಳಿಸಿದ ಪ್ರಚಾರ ವಾಹನಕ್ಕೂ ಸಹ ಪೂಜೆ ಸಲ್ಲಿಸಿ ಚುನಾವಣೆಯ ಪ್ರಚಾರಕ್ಕೆ ಅಧಿಕೃತವಾಗಿ ಚಾಲನೆಯನ್ನು ​ನೀಡಿದರು. 

ಇದೇ ವೇಳೆ ಕಳೆದ 5 ವರ್ಷದ ತಮ್ಮ ಸಾಧನೆ, ಅದಕ್ಕೆ ಜನರು ನೀಡಿದ ಸಹಕಾರ, ತಾವು ಅನುಭವಿಸದ ಸಂಕಷ್ಟ, ಜನರ ಪ್ರೀತಿ ವಿಶ್ವಾಸ ಎಲ್ಲವನ್ನೂ ಸಂಕ್ಷಿಪ್ತವಾಗಿ ವಿವರಿಸುವ ಮತ್ತು ಬರಲಿರುವ ಚುನಾವಣೆಯಲ್ಲಿ ತಮ್ಮನ್ನು ಆಶಿರ್ವದಿಸುವಂತೆ ಕೋರುವ ಪ್ರಚಾರ ಕರಪತ್ರಗಳನ್ನು ಸಹ ಬಿಡುಗಡೆಗೊಳಿಸಲಾಯಿತು.

​​ಈ ಸಮಯದಲ್ಲಿ  ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಸಿ ಸಿ ಪಾಟೀಲ, ಯುವರಾಜ ಕದಂ, ಸುರೇಶ ಇಟಗಿ, ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್, ಮನೋಹರ ಬೆಳಗಾಂವ್ಕರ್, ರಮಾಕಾಂತ ಪಾವಸೆ, ರಘುನಾಥ ಖಂಡೇಕರ್, ಪ್ರವೀಣ ಪಾಟೀಲ, ಜಯವಂತ ಬಾಳೇಕುಂದ್ರಿ , ಮಹೇಶ ಸುಗ್ನೆಣ್ಣವರ, ದತ್ತಾ ಬಂಡಿಗೇಣಿ, ಶಂಕರಗೌಡ ಪಾಟೀಲ, ಬಸವರಾಜ ಮ್ಯಾಗೋಟಿ, ಬಸನಗೌಡ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

​ 

Related Articles

Back to top button