ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಖಾತೆ ಬದಲಾವಣೆ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನಕ್ಕೀಡಾಗಿರುವ ಸಚಿವ ಶ್ರೀರಾಮುಲು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಕೆಲ ಕಾಲ ಚರ್ಚೆ ನಡೆಸಿದ್ದಾರೆ.
ಖಾತೆ ಬದಲಾವಣೆಯಾಗುತ್ತಿದ್ದಂತೆಯೇ ಸಿಎಂ ಅವರ ಕಾವೇರಿ ನೀವಾಸಕ್ಕೆ ಬಂದ ಶ್ರೀರಾಮುಲು ಅವರಿಗೆ ಆರಂಭದಲ್ಲಿ ಮುಖ್ಯಮಂತ್ರಿ ಭೇಟಿಗೆ ಅವಕಾಶ ಸಿಕ್ಕಿಲ್ಲ. ಬಳಿಕ ಒಂದುಗಂಟೆಗೂ ಹೆಚ್ಚುಕಾಲ ಕಾದ ಶ್ರೀರಾಮುಲು ಕೊನೆಗೂ ಸಿಎಂ ಭೇಟಿಯಾಗಿ 5 ನಿಮಿಷ ಚರ್ಚೆ ನಡೆಸಿದರು. ಖಾತೆ ಹಂಚಿಕೆ ನಿಮ್ಮ ಪರಮಾಧಿಕಾರ. ಆದರೆ ನನ್ನ ಗಮನಕ್ಕೆ ತರದೇ ಏಕಾಏಕಿ ಖಾತೆ ಬದಲಾವಣೆ ಸರಿಯೇ ಎಂದು ಶ್ರೀರಾಮುಲು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.
ಈ ವೇಳೆ ಸಿಎಂ ಯಡಿಯೂರಪ್ಪ, ಈ ಹಿಂದೆ ನೀವು ಕೇಳಿದ್ದ ಸಮಾಜ ಕಲ್ಯಾಣ ಇಲಾಖೆ ಖಾತೆಯನ್ನೇ ಈಗ ನಿಮಗೆ ನೀಡಿದ್ದೇನೆ. ಈ ಬಗ್ಗೆ ಅಸಮಾಧಾನ ಬೇಡ. ಸಂಜೆ ಮತ್ತೊಮ್ಮೆ ಭೇಟಿಯಾಗಿ ಸುದೀರ್ಘವಾಗಿ ಚರ್ಚೆ ನಡೆಸುತ್ತೇನೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಸಚಿವನಾಗಿರುವುದಕ್ಕಿಂತ ಶಾಸಕನಾಗಿರುವುದೇ ಉತ್ತಮ
ಸಚಿವ ಶ್ರೀರಾಮುಲುಗೆ ಶಾಕ್ ನೀಡಿದ ಸಿಎಂ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ