
ಪ್ರಗತಿವಾಹಿನಿ ಸುದ್ದಿ: ಪಶ್ಚಿಮಘಟ ಪ್ರದೇಶದಲ್ಲಿ ಸುರಿಯುತ್ತಿರುವ ಭೀಕರ ಮಳೆಗೆ ಸೂಪಾ ಆಣೆಕಟ್ಟಿನ ನೀರಿನ ಮಟ್ಟ ಏರುತ್ತಿದ್ದು, ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಕಾಳಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೂಪಾ ಅಣೆಕಟ್ಟಿನಲ್ಲಿ ನೀರಿಮ ಸಂಗ್ರಹ ಹೆಚ್ಚಾಗಿದ್ದು, ನದಿಗೆ ಹೆಚ್ಚಿನ ನೀರು ಹರಿದು ಬಿಡಲಾಗುತ್ತಿದೆ. ಹಾಗಾಗಿ ನದಿ ಪಾತ್ರಸ ಜನರಿಗೆ ಮುನ್ನಚ್ಚರಿಕೆ ಕ್ರಮವಾಗಿ ಗಣೇಶಗುಡಿಯ ಕೆಪಿಸಿ ಸೂಚನೆ ನೀಡಿದೆ.
ಆಣೆಕಟ್ಟಿನ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆ ಬೀಳುತ್ತಿದ್ದು, ಜಲಾಶಯಕ್ಕೆ ಹೇರಳವಾಗಿ ನೀರು ಹರಿದು ಬರುತ್ತಿರುವುದರಿಂದ ಸೂಪಾ ಆಣೆಕಟ್ಟಿನ ಜಲಾಶಯದ ನೀರಿನ ಮಟ್ಟವು ಸತತವಾಗಿ ಏರುತ್ತಿದೆ. ಸೂಪಾ ಜಲಾಶಯದ ಗರಿಷ್ಠ ಮಟ್ಟವು 564.00 ಮೀಟರ ಆಗಿದ್ದು. ಸೂಪಾ ಜಲಾಶಯದ ನೀರಿನ ಸಂಗ್ರಹಣ ಸಾಮರ್ಥ್ಯವು 147.55 ಟಿ.ಎಂ.ಸಿ ಆಗಿರುತ್ತದೆ. ಜಲಾಶಯದ ಇಂದಿನ ನೀರಿನ ಮಟ್ಟವು 558.87. ಇದು ಜಲಾಶಯದ ಒಟ್ಟು ಸಾಮರ್ಥ್ಯದ 85.63% ಆಗಿರುತ್ತದೆ.
ಈ ನಿಟ್ಟಿನಲ್ಲಿ ನದಿ ಪಾತ್ರದ ಜನರಿಗೆ ಕಾಳಿ ನದಿಯಲ್ಲಿನ ಸೂಪಾ ಅಣೆಕಟ್ಟಿನ ಪ್ರವಾಹದ 3ನೇ ಹಾಗೂ ಅಂತಿಮ ಮುನ್ನೆಚ್ಚರಿಕಾ ನೋಟಿಸನ್ನು ಗಣೇಶಗುಡಿಯ ಕೆಪಿಸಿ ಕಾರ್ಯಾಲಯವು ನೀಡಿದ್ದಾರೆ.