National

*ಹೆಲಿಕಾಪ್ಟರ್ ಪತನ: ಪುಣೆ ಬಳಿ ದುರಂತ*

ಪ್ರಗತಿವಾಹಿನಿ ಸುದ್ದಿ: ಖಾಸಗಿ ಹೆಲಿಕಾಪ್ಟರ್ ಒಂದು ಪತನವಾಗಿರುವ ಘಟನೆ ಮಹಾರಾಷ್ಟ್ರದ ಪುಣೆ ಬಳಿ ನಡೆದಿದೆ.

ಹವಾಮಾನ ವೈಪರೀತ್ಯದಿಂದಾಗಿ ಬಿರುಗಾಳಿ, ಮಳೆಯಿಂದಾಗಿ ವಿಮಾನ ಪತನಗೊಂಡಿದೆ ಎನ್ನಲಾಗಿದೆ. ವಿಮಾನದಲ್ಲಿ ಪೈಲಟ್ ಸೇರಿ ನಾಲ್ವರು ಪ್ರಯಾಣಿಸುತ್ತಿದ್ದರು. ಘಟನೆಯಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಖಾಸಗಿ ಹೆಲಿಕಾಪ್ಟರ್ ಇದಾಗಿದ್ದು, ಮುಂಬೈನ ಜುಹುವಿನಿಂದ ಹೈದರಾಬಾದ್ ಗೆ ತೆರಳುತ್ತಿತ್ತು. ಈ ವೇಳೆ ಪುಣೆ ಬಳಿ ಪತನವಾಗಿದೆ ಎಂದು ತಿಳಿದುಬಂದಿದೆ.

Related Articles

Back to top button