Kannada NewsKarnataka News

ತಾಂತ್ರಿಕ ತೊಂದರೆ; ಜಿಲ್ಲೆಯ 9 ಕಡೆ ಮತದಾನ ಪ್ರಕ್ರಿಯೆ ಸ್ಥಗಿತ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮತಯಂತ್ರಗಳಲ್ಲಿನ ತಾಂತ್ರಿಕ ದೋಷದಿಂದಾಗಿ ಜಿಲ್ಲೆಯ 9 ಮತಗಟ್ಟೆಗಳಲ್ಲಿ ಮತದಾನ ಪ್ಕ್ರಿಯೆ ಕೆಲ ಕಾಲ ಸ್ಥಗಿತಗೊಂಡು ವ್ಯತ್ಯಯ ಉಂಟಾಯಿತು.

ಕಿತ್ತೂರು ಪಟ್ಟಣ, ದೇವಗಾಂವ, ಮೂಡಲಗಿ ಪಟ್ಟಣ, ಅರಬಾವಿ, ಕಾದ್ರೊಳ್ಳಿ, ನೇಸರಗಿ, ಉಳ್ಳಿಗೇರಿ, ಅಥಣಿ, ಗಳತಗಾ ಗ್ರಾಮಗಳಲ್ಲಿ ಮತಯಂತ್ರಗಳು ಕೈಕೊಟ್ಟ ಕಾರಣ ಮತದಾನ ಕೆಲ ಕಾಲ ಸ್ಥಗಿತಗೊಂಡಿತು.

Home add -Advt

ಕಿತ್ತೂರು ಪಟ್ಟಣದಲ್ಲಿ ಎರಡೂವರೆ ತಾಸುಗಳ ಕಾಲ ಮತದಾನ ಸ್ಥಗಿತಗೊಂಡಿದ್ದು, ಉಳಿದ ಮತಗಟ್ಟೆಗಳಲ್ಲಿ ಅರ್ಧದಿಂದ ಒಂದು ತಾಸು ಕಾಲ ಮತದಾನ ಪ್ರಕ್ರಿಯೆ ನಿಂತುಹೋಯಿತು.

ಇದರಿಂದಾಗಿ ಉತ್ಸಾಹದಿಂದ ಮತ ಚಲಾಯಿಸಲು ಬಂದಿದ್ತದ ಮತದಾರರು ಮತಗಟ್ಟೆ ಎದುರು ಸರದಿ ಸಾಲಿನಲ್ಲಿ ನಿಂತು ಕಾದು ಸುಸ್ತಾದರು. ತಾಂತ್ರಿಕ ತೊಂದರೆಗಳನ್ನು ನಿವಾರಿಸಿ ಮತದಾನ ಸುಗಮಗೊಳಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಆಡಳಿತ ತಿಳಿಸಿದೆ.

https://pragati.taskdun.com/bangalorepadmanabhanagarapapaih-gardenpoling-boothclash/
https://pragati.taskdun.com/khanapuraanjali-nimbalkarbjp-activistpoling-booth/

https://pragati.taskdun.com/heart-attackmandeathbelurupoling-booth/

Related Articles

Back to top button