Latest

ಖಾಸಗಿ ಬಸ್ ಹಾಗೂ ಇನ್ನೋವಾ ನಡುವೆ ಅಪಘಾತ; ಹಲವರಿಗೆ ಗಾಯ

ಪ್ರಗತಿವಾಹಿನಿ ಸುದ್ದಿ, ಯಲ್ಲಾಪುರ: ಇಲ್ಲಿಗೆ ಸಮೀಪದ ಆರತಿಬೈಲ್ ಘಟ್ಟದಲ್ಲಿ ಖಾಸಗಿ ಬಸ್ ಹಾಗೂ ಇನ್ನೋವಾ ವಾಹನದ ನಡುವೆ ಅಪಘಾತ ಸಂಭವಿಸಿದೆ.

ಮಹಾರಾಷ್ಟ್ರದಿಂದ ಗೋಕರ್ಣ, ಮುರುಡೇಶ್ವರ ಇತ್ಯಾದಿ ಸ್ಥಳಗಳಿಗೆ ಪ್ರವಾಸಕ್ಕೆಂದು 40ಕ್ಕೂ ಹೆಚ್ಚು ಜನ ಪ್ರಯಾಣಿಸುತ್ತಿದ್ದ ಖಾಸಗಿ ಬಸ್ ಮಂಗಳೂರಿನಿಂದ ಮುಂಬಯಿಗೆ ಸಾಗುತ್ತಿದ್ದ, ಕುಟುಂಬವೊಂದರ ಸದಸ್ಯರಿದ್ದ ಇನ್ನೋವಾ ವಾಹನ ಡಿಕ್ಕಿ ಹೊಡೆದಿದ್ದು ಖಾಸಗಿ ಬಸ್ ಹೆದ್ದಾರಿಯ ಪಕ್ಕದಲ್ಲೇ ಮಗುಚಿ ಬಿದ್ದಿದೆ.

Home add -Advt

ಅದೃಷ್ಟವಶಾತ್ ಉಭಯ ವಾಹನಗಳ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು ಕೆಲವರಿಗೆ ಗಾಯಗಳಾಗಿವೆ. ಇನ್ನೋವಾ ವಾಹನ ಚಾಲಕನ ಅಜಾಗರೂಕತೆ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

https://pragati.taskdun.com/reva-collagestudentmurderbangalore/
https://pragati.taskdun.com/drinking-water-problem-in-14-villages-of-khanapur-taluk/
https://pragati.taskdun.com/karnatakarain-up-datealert/

Related Articles

Back to top button