Latest

ಸುಷ್ಮಿತಾ ಸೇನ್ ಜತೆ ಲಲಿತ್ ಮೋದಿ ಡೇಟಿಂಗ್; ಫೋಟೋ ಶೇರ್ ಮಾಡಿ ಮಾಹಿತಿ ನೀಡಿದ ಐಪಿಎಲ್ ಮಾಜಿ ಅಧ್ಯಕ್ಷ

ಪ್ರಗತಿವಾಹಿನಿ ಸುದ್ದಿ; ಮುಂಬೈ: ಬಾಲಿವುಡ್ ನಟಿ, ಮಾಜಿ ವಿಶ್ವಸುಂದರಿ ಸುಷ್ಮಿತಾ ಸೇನ್, ಐಪಿಎಲ್ ಮಾಜಿ ಚೇರ್ಮನ್, ಉದ್ಯಮಿ ಲಲಿತ್ ಮೋದಿಯವರೊಂದಿಗೆ ಡೇಟಿಂಗ್ ಮಾಡುತ್ತಿರುವ ಸುದ್ದಿ ಇದೀಗ ಭಾರಿ ವೈರಲ್ ಆಗಿದೆ.

ಸುಷ್ಮಿತಾ ಸೇನ್, ಇತ್ತೀಚೆಗೆ ರೊಹ್ಮನ್ ಶಾಲ್ ಜತೆ ಬ್ರೇಕ್ ಅಪ್ ಆಗಿದ್ದರು. ಇದೀಗ ಐಪಿಎಲ್ ಪಂದ್ಯಾವಳಿ ಮೊದಲ ಅಧ್ಯಕ್ಷರಾಗಿದ್ದ ಲಲಿತ್ ಮೋದಿ ಜತೆ ಡೆಟಿಂಗ್ ನಲ್ಲಿದ್ದಾರೆ. ಈ ಬಗ್ಗೆ ಸ್ವತ: ಲಲಿತ್ ಮೋದಿ ಕೆಲ ಫೋಟೋಗಳನ್ನು ಶೇರ್ ಮಾಡಿ ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದಾರೆ. ಲಲಿತ್ ಮೋದಿ ಟ್ವೀಟ್ ಬೆನ್ನಲ್ಲೇ ಸುಷ್ಮಿತಾ ಹಾಗೂ ಲಲಿತ್ ಮೋದಿ ವಿವಾಹವಾಗಿದ್ದಾರೆ ಎಂದು ವರದಿಯಾಗಿತ್ತು. ಇದೀಗ ಈ ಬಗ್ಗೆಯೂ ಮತ್ತೊಂದು ಟ್ವೀಟ್ ಮಾಡಿ ಲಲಿತ್ ಮೋದಿ ಸ್ಪಷ್ಟನೆ ನೀಡಿದ್ದಾರೆ.

ಸುಷ್ಮಿತಾ ಸೇನ್ ಹಾಗೂ ತಾವು ಪರಸ್ಪರ ಡೇಟಿಂಗ್ ನಲ್ಲಿದ್ದೇವೆ ಹೊರತು ಮದುವೆಯಾಗಿಲ್ಲ ಎಂದು ತಿಳಿಸಿದ್ದಾರೆ. ಅದೂ ಸಧ್ಯದಲ್ಲೇ ಆಗಲಿದೆ ಎಂದಿದ್ದಾರೆ. ಅಲ್ಲದೆ ಕೆಲ ಫೋಟೋಗಳನ್ನು ಶೇರ್ ಮಾಡಿದ್ದಾರೆ.

“Lalit Modi says he is dating Sushmita Sen”

https://twitter.com/i/events/1547596923816751111?t=YEpNQrFFmUUBh3Depadp2A&s=03

 

ದೇಶದಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣ ಪತ್ತೆ; ರಾಜ್ಯಗಳಿಗೆ ಆರೋಗ್ಯ ಇಲಾಖೆ ಕಟ್ಟೆಚ್ಚರ

Related Articles

Back to top button