
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ದುಬಾರಿ ರೇಷ್ಮೆ ಸೀರೆ ಹೊಲಿಗೆಗೆ ನೀಡಿದ್ದ ವೇಳೆ ಹಾನಿಯುಂಟು ಮಾಡಿದ್ದಕ್ಕೆ ಮಹಿಳೆಯೊಬ್ಬರು ಟೈಲರ್ ವಿರುದ್ಧ ಕಾನೂನು ಹೋರಾಟ ನಡೆಸಿ ಜಯಗಳಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ರೇಷ್ಮೆ ಸೀರೆ ಹಾನಿಯಾಗಿದ್ದಕ್ಕೆ ಎರಡು ವರ್ಷ ಕಾಲ ಮಹಿಳೆ ಕಾನೂನು ಸಮರ ಸಾರಿ ಗೆದ್ದಿದ್ದಾರೆ. ಬೆಂಗಳೂರಿನ ಮಂಗಳಾ ಇವಾನಿ ಎಂಬ ಮಹಿಳೆ 2019ರಲ್ಲಿ ತಮ್ಮ ಬಳಿ ಇದ್ದ ದುಬಾರಿ ರೇಷ್ಮೆ ಸೀರೆಯನ್ನು ಆಲ್ಟ್ರೇಷನ್ ಗೆ ಮನೆ ಸಮೀಪವೇ ಇದ್ದ ಟೈಲರ್ ಗೆ ನೀಡಿದ್ದರು. ಆದರೆ ಸೀರೆಗೆ ಹಾನಿ ಮಾಡಿ ಮರಳಿಸಿದ್ದರು.
ಇದರಿಂದ ಟೈಲರಿಂಗ್ ಶಾಪ್ ನಡೆಸುತ್ತಿದ್ದ ದಿವ್ಯಾ ಎಂಬುವವರ ವಿರುದ್ಧ ಮಂಗಳಾ ದೂರು ದಾಖಲಿಸಿ ಕಾನೂನು ಹೋರಾಟ ಆರಂಭಿಸಿದ್ದರು. 2020, ಜನವರಿ 18ರಿಂದ ಗ್ರಾಹಕರ ವೇದಿಕೆ ಕೋರ್ಟ್ ನಲ್ಲಿ ವಿಚಾರಣೆ ಆರಂಭವಾಗಿತ್ತು. ಎರಡು ವರ್ಷಗಳ ವಿಚಾರಣೆ ಬಳಿಕ ಟೈಲರ್ ಶಾಪ್ ನ ದಿವ್ಯಾ ದೋಷಿ ಎಂದು ತೀರ್ಪು ನೀಡಿರುವ ನ್ಯಾಯಾಲಯ ಮಂಗಳಾ ಅವರಿಗೆ ಪರಿಹಾರ ನೀಡುವಂತೆ ಆದೇಶ ನೀಡಿದೆ.
ಸೀರೆಯ ಮೊತ್ತ 21,975 ರೂಪಾಯಿ ಹಾಗೂ 10,000 ಪರಿಹಾರ ನೀಡಲು ಕೋರ್ಟ್ ಸೂಚಿಸಿದ್ದು, 30 ದಿನಗಳಲ್ಲಿ ದಂಡ ಪಾವತಿ ಮಾಡುವಂತೆಯೂ ತಿಳಿಸಿದೆ.
ಕ್ರಿಕೇಟ್ ಈಗಿನಂತಿದ್ದರೆ ಸಚಿನ್ 1 ಲಕ್ಷ ರನ್ ಬಾರಿಸುತ್ತಿದ್ರು ಎಂದ ಶೋಯೆಬ್ ಅಕ್ತರ್