Belagavi NewsBelgaum News

*ಟ್ರ್ಯಾಕ್ಟರ್ ಮೂಲಕ ಆಗಮಿಸಿದ ಹೋರಾಟಗಾರರು ಪೊಲೀಸ್ ವಶಕ್ಕೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪಂಚಮಸಾಲಿ ಹೋರಾಟದ ಮೇಲೆ ನಿರ್ಬಂಧ ಹೇರಿದ್ದ ಜಿಲ್ಲಾಡಳಿತ, ಅದನ್ನು ತೆರವುಗೊಳಿಸಿದೆ‌. ಯಾರೂ ಭಯಭೀತರಾಗದೇ ಶಾಂತಿಯುತವಾಗಿ ಹೋರಾಟದಲ್ಲಿ ಭಾಗವಹಿಸಿ ಎಂದು ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಕರೆ ನೀಡಿದ್ದರು.

ಈ ಹಿನ್ನಲೆ ಇಂದು ಬೃಹತ್ ಸಮಾವೇಶ ನಡೆಯುತ್ತಿದೆ. ಸಮಾವೇಶದಲ್ಲಿ ಪಾಲ್ಗೊಳ್ಳಲು ಲಕ್ಷಾಂತರ ಜನರು ಆಗಮಿಸುತ್ತಿದ್ದಾರೆ. ಹೋರಾಟದ ಮೂಲಕ ಅಪಂಚಮಸಾಲಿ ಮುಖಂಡರು ಆಗಮಿಸುತ್ತಿದ್ದು, ಈ ವೇಳೆ ರ್ಯಾಕ್ಟರ್ ಮೂಲಕ ರ್ಯಾಲಿಗೆ ಹಲವರು ಮುಂದಾಗಿದ್ದಾರೆ. ನಿಷೇಧದ ನಡುವೆಯೂ ಟ್ರ್ಯಾಕ್ಟರ್ ಮೂಲಕ ಆಗಮಿಸುತ್ತಿದ್ದ ಹಿನ್ನೆಲೆಯಲ್ಲಿ ಹೀರೆ ಬಾಗೇವಾಡಿ ಟೋಲ್ ಬಳಿ ಟ್ರ್ಯಾಕ್ಟರ್ ಗಳನ್ನು ಪೊಲೀಸರು ತಡೆದಿದ್ದಾರೆ‌. 

Home add -Advt

ಟ್ರ್ಯಾಕ್ಟರ್ ಆಗಮಿಸದಂತೆ ಬ್ಯಾರಿಕೇಡ್ ಅಳವಡಿಸಿ ಬಿಗಿ ಬಂದೋಬಸ್ತ್‌ ಮಾಡಿದ ಪೊಲೀಸರು, ಹೋರಾಟಗಾರರನ್ನು ವಶಕ್ಕೆ ಪಡೆದಿದ್ದಾರೆ. ಇದೆ ವೇಳೆ ಹೋರಾಟಗಾರರು ಸಿಎಂ ಸಿದ್ದರಾಮಯ್ಯ ಹಾಗೂ ಪೊಲೀಸರಿಗೆ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿ ಪ್ರಜಾಪ್ರಭುತ್ವದಲ್ಲಿ ಹೋರಾಟ ಮಾಡಲು ಅವಕಾಶ ಇದೆ. ನಮ್ಮನ್ನು ಏಕೆ ತಡೆಯುತ್ತೀರಿ? ಎಂದು ಪ್ರಶ್ನಿಸಿದ್ದಾರೆ.

ಇದೆ ವೇಳೆ ಹೋರಾಟ ತಡೆದ ಕ್ರಮವನ್ನು ಖಂಡಿಸಿ ಹೋರಾಟಗಾರರು ಟೋಲ್ ಬಳಿ ಬರುತ್ತಿರುವ ಕೆಎಸ್ಆರ್ಟಿಸಿ ಬಸ್ ಹತ್ತಿ, ಜೈ ಪಂಚಮಸಾಲಿ ಎಂದು ಘೋಷಣೆ ಕೂಗಿ ಬಸ್ ಮೂಲಕ ಪ್ರತಿಭಟನೆ ಟೆಂಟ್ ಗೆ ಆಗಮಿಸಲು ಮುಂದಾಗಿದ್ದಾರೆ. ಹೀಗಾಗಿ ಪ್ರತಿಭಟನಕಾರರನ್ನು ತಡೆಯಲು ಪೋಲಿಸರು ಹರಸಾಹಸ ಪಡೆವಂತಾಯಿತು.

Related Articles

Back to top button