Kannada NewsKarnataka NewsNationalPolitics

*ಕಾಶ್ಮೀರದಲ್ಲಿ ಉಗ್ರರ ದಾಳಿ: ಮೃತ ದೇಹಗಳನ್ನು ಗುರುತಿಸಲು ಕನ್ನಡಿಗರಿಗೆ ಸಚಿವ ಸಂತೋಷ್‌ ಲಾಡ್‌ ನೆರವು*

ಪ್ರಗತಿವಾಹಿನಿ ಸುದ್ದಿ: ಉಗ್ರರ ದಾಳಿಯಲ್ಲಿ ಮೃತಪಟ್ಟಿರುವವರ ಗುರುತು ಪತ್ತೆಗೆ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಅವರು ಮೃತರ ಸಂಬಂಧಿಕರಿಗೆ ನೆರವು ನೀಡಿದ್ದಾರೆ. 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಸಚಿವ ಲಾಡ್‌ ಅವರು ರಾತ್ರೋರಾತ್ರಿ ಕಾಶ್ಮೀರದಲ್ಲಿ ತೊಂದರೆಗೊಳಗಾದ ಕನ್ನಡಿಗರ ರಕ್ಷಣೆಗೆ ಕಾಶ್ಮೀರಕ್ಕೆ ತೆರಳಿದ್ದಾರೆ.  ನಸುಕಿನಲ್ಲೇ ಪಹಲ್ಗಾಮ್ ತಲುಪಿರುವ ಸಂತೋಷ ಲಾಡ್ ಮೃತರ ಸಂಬಂಧಿಕರ ಜೊತೆ ಚರ್ಚೆ ನಡೆಸಿ, ಅವರಿಗೆ ಸಕಲ ನೆರವು ನೀಡುತ್ತಿದ್ದಾರೆ.

Home add -Advt

ಪಹಲ್ಗಾಮ್‌ನಲ್ಲಿ ಮೃತದೇಹಗಳನ್ನು ಇರಿಸಲಾಗಿದ್ದು, ಮೃತರ ಸಂಬಂಧಿಕರೊಂದಿಗೆ ಪಾರ್ಥಿವ ಶರೀರಗಳನ್ನು ಗುರುತಿಸಲು ನೆರವಾಗಿದ್ದಾರೆ. 

ಮೃತದೇಹಗಳು ನಿಮ್ಮ ಸಂಬಂಧಿಕರೇ ಎಂಬುದನ್ನು ಖಚಿತಪಡಿಸಿಕೊಳ್ಳಿ, ನೀವು ಎಷ್ಟು ಜನ ಬಂದಿದ್ದೀರಿ ಎಂಬ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಯಾವ ಮೃತದೇಹಗಳನ್ನು ಈಗಾಗಲೇ ನೋಡಲಾಗಿದೆ ಎಂಬುದನ್ನೂ ಸಹ ಅವರು ತಪಾಸಣೆ ಮಾಡುತ್ತಿದ್ದಾರೆ.  

ಮೃತದೇಹಗಳನ್ನು ಇರಿಸಲಾಗಿರುವ ಪೆಟ್ಟಿಗೆಗಳ ಮೇಲೆ ದೂರವಾಣಿ ಕರೆಗಳನ್ನು ನಮೂದಿಸಲಾಗಿದ್ದು, ಸಂಬಂಧಿಕರಿಗೆ ಕರೆ ಮಾಡಿ ಸ್ವತಃ ಸಂತೋಷ್‌ ಲಾಡ್‌ ಅವರೇ ತಿಳಿಸುತ್ತಿದ್ದಾರೆ. 

“ಮೃತದೇಹಗಳನ್ನು ಕರ್ನಾಟಕಕ್ಕೆ ತರಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುವುದು. ತೊಂದರೆಗೊಳಗಾದವರಿಗೆ ಅಗತ್ಯ ನೆರವನ್ನು ಮಾಡಲಾಗುವುದು. ನಮ್ಮ ಸರ್ಕಾರ ಏಲ್ಲಾ ರೀತಿಯಲ್ಲಿ ಸಹಾಯ ಮಾಡಲಿದೆ” ಎಂದು ಲಾಡ್‌ ಅವರು ತಿಳಿಸಿದ್ದಾರೆ. 

ಮಂಜುನಾಥ ಅವರ ಮೃತದೇಹ ಸಂಜೆ 6 ಗಂಟೆಗೆ ಶಿವಮೊಗ್ಗ ತಲುಪಲಿದೆ, ಭರತ ರಡ್ಡಿ ಮೃತದೇಹ 3 ಗಂಟೆಗೆ ಬೆಂಗಳೂರು ತಲುಪಲಿದೆ.

ಇಬ್ಬರ ಗುರುತು ಪತ್ತೆ

ಉಗ್ರರ ದಾಳಿಯಲ್ಲಿ ಮೃತಪಟ್ಟ ಶಿವಮೊಗ್ಗ ಮತ್ತು ರಾಣೇಬೆನ್ನೂರಿನ ಇಬ್ಬರು ಪ್ರವಾಸಿಗರ ಗುರುತು ಪತ್ತೆಯಾಗಿದ್ದು, ಇನ್ನೂ ಒಬ್ಬರ ಗುರುತು ಸಿಗಬೇಕಿದೆ.

Related Articles

Back to top button