Kannada NewsKarnataka NewsLatest

ಆಸ್ಪತ್ರೆಗೆ ಭೇಟಿ ನೀಡಿ ಆನಂದ ಮಾಮನಿ ಆರೋಗ್ಯ ವಿಚಾರಿಸಿದ ಬಿಎಸ್ ವೈ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶನಿವಾರ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸವದತ್ತಿ ಕ್ಷೇತ್ರದ ಶಾಸಕ, ವಿಧಾನಸಭೆ ಉಪಾಧ್ಯಕ್ಷ ಆನಂದ ಮಾಮನಿ ಅವರ ಆರೋಗ್ಯ ವಿಚಾರಿಸಿದರು.

ಆನಂದ ಮಾಮನಿ ಅವರನ್ನು ಚೆನ್ನೈ ಆಸ್ಪತ್ರೆಯಿಂದ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಒಂದೆರಡು ದಿನದಲ್ಲಿ ಅಮೇರಿಕಾದಿಂದ ತಜ್ಞ ವೈದ್ಯರು ಆಗಮಿಸಿ ಚಿಕಿತ್ಸೆ ನೀಡಲಿದ್ದಾರೆ ಎಂದು ಗೊತ್ತಾಗಿದೆ.

Home add -Advt

ಶಾಸಕರಿಗೆ ಬದಲಿ ಲಿವರ್ ಜೋಡಿಸುವ ಸಾಧ್ಯತೆ ಇದ್ದು, ಇನ್ನೂ ಕೆಲವು ದಿನ ಚಿಕಿತ್ಸೆ ನಡೆಯಲಿದ್ದು, ನಂತರ ಹೆಚ್ಚಿನ ಅವಧಿ ವಿಶ್ರಾಂತಿಯ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಶನಿವಾರ ವಿಧಾನ ಪರಿಷತ್ ಸದಸ್ಯ ರವಿಕುಮಾರ ಅವರೊಂದಿಗೆ ಆಸ್ಪತ್ರೆಗೆ ತೆರಳಿದ ಬಿ.ಎಸ್.ಯಡಿಯೂರಪ್ಪ, ಮಾಮನಿಯವರೊಂದಿಗೆ ಕೆಲಹೊತ್ತು  ಕಳೆದರಲ್ಲಿದೆ, ಅವರ ಆರೋಗ್ಯದ ಕುರಿತು ಸಂಪೂರ್ಣ ಮಾಹಿತಿ ಪಡೆದು, ಧೈರ್ಯ ತುಂಬಿದರು.

 

ಆನಂದ ಮಾಮನಿ ಆರೋಗ್ಯ ತಪಾಸಣೆಗೆ ಚೆನ್ನೈ ಆಸ್ಪತ್ರೆಗೆ ದಾಖಲು

https://pragati.taskdun.com/latest/ananda-mamani-admitted-to-chennai-hospital-for-health-care/

Related Articles

Back to top button