Karnataka NewsTravel
*ಕುರಿಗಳ ಖರೀದಿಗೆ ಹೊರಟ್ಟಿದ್ದ ವೇಳೆ ಅಪಘಾತ: ನಾಲ್ವರ ದಾರುಣ ಸಾವು*

ಪ್ರಗತಿವಾಹಿನಿ ಸುದ್ದಿ: ಕುರಿಗಳನ್ನು ಖರೀದಿಸಲು ಹೊರಟ್ಟಿದ್ದ ವೇಳೆ ಮಧ್ಯ ರಾತ್ರಿ ಬೊಲೆರೋ ಪಿಕಪ್ ವಾಹನವು ಹೆದ್ದಾರಿಯ ಬಳಿಯ ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಅಮರಾಪುರ ಗ್ರಾಮದ ಬಳಿ ನಡೆದಿದೆ.
ಮೃತರನ್ನು ತೆಲಂಗಾಣ ಮೂಲದ ನಾಗಭೂಷಣ, ಮುರಳಿ, ಸೋಮ ಹಾಗೂ ನಾಗರಾಜ್ ಎಂದು ಗುರುತಿಸಲಾಗಿದೆ. ನಾಲ್ವರೂ ಸಹ ಹಿಂದೂಪುರದಿಂದ ಹೊರಟು ಶಹಾಪುರ ಸಂತೆಯಲ್ಲಿ ಕುರಿಗಳನ್ನು ಖರೀದಿಸಲು ತೆರಳುತ್ತಿದ್ದರು.
ಮೃತ ದೇಹಗಳನ್ನು ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದು ಗಟ್ಟೂರು ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ದೂರು ದಾಖಲಿಸಿಕೊಂಡಿದ್ದಾರೆ.



