Karnataka News

*ಸಾಲ ತೀರಿಸದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ: ನೊಂದ ಉದ್ಯಮಿ ಆತ್ಮಹತ್ಯೆ*

ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಫೈನಾನ್ಸ್ ಕಿರುಕುಳ ಮಿತಿ ಮೀರಿದ್ದು, ಜನರು ಸಾವಿಗೆ ಶರಣಾಗುತ್ತಿದ್ದಾರೆ. ಫೈನಾನ್ಸ್ ನವರ ಕಾಟ, ಜೀವ ಬೆದರಿಕೆಗೆ ನೊಂದು ಉದ್ಯಮಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ರಾಜಾಜಿನಗರದಲ್ಲಿ ನಡೆದಿದೆ.

Home add -Advt

ಅರುಣ್ (38) ಆತ್ಮಹತ್ಯೆಗೆ ಶರಣಾಗಿರುವ ಉದ್ಯಮಿ. ಅರುಣ್ ಪೂಜಾ ಎಂಟ್ರಪ್ರೈಸೆಸ್ ದಿನೇಶ್ ಎಂಬುವವರ ಬಳಿ 6 ಲಕ್ಷ ರೂಪಾಯಿ ಸಾಲ ಪಡೆದುಕೊಂಡಿದ್ದರಂತೆ. ಸಾಲಕ್ಕೆ ಶೂರಿಟಿಗಾಗಿ ಅರುಣ್ ಕಾರನ್ನು ದಿನೇಶ್ ಪಡೆದಿದ್ದರಂತೆ. ಒಂದು ವಾರದ ಹಿಂದಷ್ಟೇ 1.50 ಲಕ್ಷ ರೂ ಹಣವನ್ನು ಅರುಣ್ ಮರುಪಾವತಿ ಮಾಡಿದ್ದರಂತೆ. ಆದರೆ ಬಾಕಿ ಹಣವನ್ನು ಬೇಗನೇ ವಾಪಸ್ ಕೊಡುವಂತೆ ದಿನೇಶ್ ಪೀಡಿಸುತ್ತಿದ್ದನಂತೆ.

ಶೀಘ್ರವಾಗಿ ಬಾಕಿ ಸಾಲ ತೀರಿಸದಿದ್ದರೆ ಕೊಲೆ ಮಾಡುತ್ತೇನೆ ಎಂದು ಮನೆ ಬಳಿ ಬಂದು ಬೆದರಿಕೆ ಹಾಕಿದ್ದನಂತೆ. ಇಲ್ಲವೇ ಹೋಗಿ ಸಾಯಿ ಎಂದು ಬೈದಿದ್ದನಂತೆ. ಈ ಘಟನೆಯಿಂದ ತೀವ್ರವಾಗಿ ಮನನೊಂದ ಅರುಣ್ ಮನೆಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related Articles

Back to top button