Latest

ಬ್ರಹ್ಮಗಿರಿ ಬೆಟ್ಟ ಕುಸಿತ: ತಲಕಾವೇರಿ ದೇವಾಲಯದ ಅರ್ಚಕರ ಕುಟುಂಬ ಮಣ್ಣಿನಡಿ ಸಿಲುಕಿರುವ ಶಂಕೆ

ಪ್ರಗತಿವಾಹಿನಿ ಸುದ್ದಿ; ಮಡಿಕೇರಿ: ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ವರುಣನ ಅಬ್ಬರಕ್ಕೆ ಕೊಡಗು ಜಿಲ್ಲೆ ಅಕ್ಷರಶ: ತತ್ತರಗೊಂಡಿದೆ. ಭಾರೀ ಮಳೆಯಿಂದಾಗಿ ಕೊಡಗಿನ ಬ್ರಹ್ಮಗಿರಿ ಬೆಟ್ಟ ಕುಸಿದು ಮನೆಗಳ ಮೇಲೆ ಬಿದ್ದಿದ್ದು, ಐವರು ನಾಪತ್ತೆಯಾಗಿದ್ದಾರೆ.

ಕೊಡಗಿನ ತಲಕಾವೇರಿ ದೇವಾಲಯದ ಬಳಿಯ ಬ್ರಹ್ಮಗಿರಿ ಬೆಟ್ಟ ಎರಡು ಮನೆಗಳ ಮೇಲೆ ಕುಸಿದಿದೆ. ಪರಿಣಾಮ ಮನೆಗಳು ಸಂಪೂರ್ಣ ನೆಲಸಮವಾಗಿವೆ. ತಲಕಾವೇರಿ ದೇವಾಲಯದ ಪ್ರಧಾನ ಅರ್ಚಕರಾದ ನಾರಾಯಣಾಚಾರ್, ಅವರ ಪತ್ನಿ ಶಾಂತಾ, ನಾರಾಯಾಣಾಚಾರ್ ಅಣ್ಣ ಹಾಗೂ ಇಬ್ಬರು ಅಡುಗೆಯವರು ಸೇರಿದಂತೆ ಐವರು ನಾಪತ್ತೆಯಾಗಿದ್ದಾರೆ.

ಮುಂಜಾನೆಯಿಂದ ನಾರಾಯಣಾಚಾರ್ ಕುಟುಂಬದವರು ಯಾರೂ ಸಂಪರ್ಕಕ್ಕೆ ಸಿಗುತ್ತಿಲ್ಲ. ಮನೆಯ ಮೇಲೆ ಗುಡ್ಡ ಕುಸಿದಿರುವ ಹಿನ್ನಲೆಯಲ್ಲಿ ಮನೆಯ ಅವಶೇಷಗಳಡಿಯಲ್ಲಿ ಕುಟುಂಬ ಸದಸ್ಯರು ಸಿಲುಕಿರುವ ಆತಂಕ ಎದುರಾಗಿದೆ. ಘಟನೆ ಹಿನ್ನಲೆಯಲ್ಲಿ ಎನ್ ಡಿ ಆರ್ ಎಫ್ ತಂಡ ಸ್ಥಳಕ್ಕೆ ಧಾವಿಸಿದ್ದು, ಶೋಧಕಾರ್ಯ ಆರಂಭಿಸಿದೆ.

ಕೊಡಗಿನಾದ್ಯಂತ ಕಳೆದ ನಾಲ್ಕು ದಿನಗಳಿಂದ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದ್ದು, ಜಿಲ್ಲೆಯಾದ್ಯಂತ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ. ಮಾತ್ರವಲ್ಲ ತಲಕಾವೇರಿ ಭಾಗಮಂಡಲ ಮಾರ್ಗಗಳ ಮಧ್ಯೆ ರಸ್ತೆ ಮೇಲೂ ಗುಡ್ಡಗಳು ಕುಸಿದಿದ್ದು, ರಸ್ತೆ ಮಾರ್ಗ ಕೂಡ ಬಂದ್ ಆಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button