Kannada NewsKarnataka NewsLatest

ದಿನಾಂಕ ಘೋಷಣೆ ಮೊದಲೇ ಶಿಕ್ಷಕರ ಸಂಘದ ಚುನಾವಣೆ ಕಣ ರಂಗು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಶಿಕ್ಷಕರ ಸಂಘದ ಚುನಾವಣೆ ದಿನಾಂಕ ಇನ್ನೂ ಘೋಷಣೆಯಾಗಿಲ್ಲ. ಆದರೆ ಬೆಳಗಾವಿ ಜಿಲ್ಲೆಯಲ್ಲಿ ಆಗಲೇ ಪ್ರಚಾರದ ಕಣ ರಂಗೇರಿದೆ.

ಹಾಲಿ ಅಧ್ಯಕ್ಷ ಜಯಕುಮಾರ ಹೆಬಳಿ ಈಗಾಗಲೆ ಜಿಲ್ಲಾದ್ಯಂತ ಸಭೆಗಳನ್ನು ನಡೆಸಿ ಪ್ರಚಾರ ನಡೆಸಿದ್ದಾರೆ. ಪ್ರಗತಿಪರ ಶಿಕ್ಷಕರ ಪೆನಲ್ ಎಂದು ಹೆಸರಿಸಿಕೊಂಡಿರುವ ಅವರು ಹಿರೇಬಾಗೇವಾಡಿ ಗ್ರಾಮದ ಜಾಲಿ ಕರೆಮ್ಮ ದೇವಸ್ಥಾನದಲ್ಲಿ ಶನಿವಾರ ಸಭೆ ನಡೆಸಿದರು.

Home add -Advt

ಕಳೆದ 6 ವರ್ಷದಲ್ಲಿ ಬೆಳಗಾವಿ ಜಿಲ್ಲಾ ಸಂಘ ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಿದೆ. ಇಂತಹ ಅವಕಾಶ ನೀಡಿದ್ದಕ್ಕೆ ಶಿಕ್ಷಕರಿಗೆ ಋಣಿಯಾಗಿರುತ್ತೇನೆ. ಮತ್ತೊಮ್ಮೆ ಅವಕಾಶ ಮಾಡಿಕೊಡಬೇಕು ಎಂದು ಹೆಬಳಿ ವಿನಂತಿಸಿದರು.

ಖಜಾಂಚಿ ಆರ್.ವ್ಹಿ.ಗೋಣಿ, ಪ್ರಗತಿಪರ ಪೆನಲ್ ನೇತೃತ್ವದಲ್ಲಿ ಕಳೆದ ಆರು ವರ್ಷಗಳಲ್ಲಿ ಆಗಿರುವ ಕೆಲಸಗಳನ್ನು ವಿವರಿಸಿದರು.

ಗ್ರಾಮೀಣ ಅಧ್ಯಕ್ಷ ಕೆಂಪಣ್ಣ ನಿರ್ವಾಣಿ , ಕಾರ್ಯದರ್ಶಿ ಮೈಲಾರ ಹೊರಕೇರಿ, ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಚಂದ್ರು ಕೋಲಕಾರ,  ನಾಗರಾಜ ಮೇಳೆದ, ಡಾ.ಗಜಾನಂದ ಸೊಗಲನ್ನವರ, ಐ.ಜಿ. ಗೂಳಪ್ಪನವರ, ನವೀನ ಪಾಟೀಲ್, ಎಸ್.ಎಸ್. ಕಡೆಮಣಿ ಮೊದಲಾದವರು ಪಾಲ್ಗೊಂಡು ಮಾತನಾಡಿದರು. ವೈ.ಬಿ.ಪೂಜೇರ ಸ್ವಾಗತಿಸಿದರು.

 

Related Articles

Back to top button