ಪ್ರಗತಿವಾಹಿನಿ ಸುದ್ದಿ, ದುಬೈ: ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ದುಬೈನಲ್ಲಿ ನಡೆದ 2022ರ ಏಷ್ಯಾ ಕಪ್ ಸೂಪರ್ 4 ಪಂದ್ಯದಲ್ಲಿ ಗುರುವಾರ ಅಫ್ಘಾನಿಸ್ತಾನ ವಿರುದ್ಧ 61 ಎಸೆತಗಳಲ್ಲಿ 122 ರನ್ ಗಳಿಸಿದ ನಂತರ T20I ಪಂದ್ಯದಲ್ಲಿ ಭಾರತೀಯರ ಗರಿಷ್ಠ ಸ್ಕೋರ್ ದಾಖಲಿಸಿದರು.
ಅವರು 2017ರ ಡಿಸೆಂಬರ್ 22ರಂದು ಶ್ರೀಲಂಕಾ ವಿರುದ್ಧ ಕೊಹ್ಲಿ118(43) ರನ್ ಬಾರಿಸಿದ್ದ ರೋಹಿತ್ ಶರ್ಮಾ ಅವರ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ. ಈಗ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 71 ಶತಕಗಳನ್ನು ಬಾರಿಸಿದ್ದಾರೆ.
ಕಾಂಟಿನೆಂಟಲ್ ಟೂರ್ನಮೆಂಟ್‌ನಲ್ಲಿ ಟೀಮ್ ಇಂಡಿಯಾಗೆ ಮರಳಿದ ನಂತರ ಕೊಹ್ಲಿ ಮೊದಲ ಬಾರಿ 53 ಎಸೆತಗಳಲ್ಲಿ ತಮ್ಮ ಶತಕವನ್ನು ತಲುಪಿದರು. ಶತಕ ಬಾರಿಸುವ ಮೊದಲು, ಕೊಹ್ಲಿ ಏಷ್ಯಾಕಪ್‌ನಲ್ಲಿ ಹಾಂಗ್ ಕಾಂಗ್ ವಿರುದ್ಧ 59 ಮತ್ತು ಪಾಕಿಸ್ತಾನದ ವಿರುದ್ಧ 60 ಸೇರಿದಂತೆ ಎರಡು ಅರ್ಧಶತಕಗಳನ್ನು ಗಳಿಸಿದ್ದರು.
ಇದೇ ವೇಳೆ ಪುರುಷರ T20 ಏಷ್ಯಾಕಪ್ ಇತಿಹಾಸದಲ್ಲಿ ಭಾರತ ಇದುವರೆಗಿನ ಗರಿಷ್ಠ ಮೊತ್ತವನ್ನು (212/2) ದಾಖಲಿಸಿದೆ. ವಿರಾಟ್ ಕೊಹ್ಲಿ ಹೊರತಾಗಿ ಭುವನೇಶ್ವರ್ ಕುಮಾರ್ 84 ವಿಕೆಟ್‌ಗಳೊಂದಿಗೆ ಟಿ20ಐ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು.
ಡೈಮಂಡ್ ಟ್ರೋಫಿ ಗೆದ್ದ ಮೊದಲ ಭಾರತೀಯ ಹೆಗ್ಗಳಿಕೆಗೆ ಪಾತ್ರರಾದ ನೀರಜ್ ಛೋಪ್ರಾ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ