Kannada NewsKarnataka News

ಬೆಂಕಿ ತಗುಲಿ ಹತ್ತಾರು ಬಣವೆಗಳು ಸುಟ್ಟು ಭಸ್ಮ

ಪ್ರಗತಿವಾಹಿನಿ ಸುದ್ದಿ : ಒಂದು ಬಣವೆಯಿಂದ ಇನ್ನೊಂದು ಬಣವೆಗೆ ಬೆಂಕಿ ತಗುಲಿ ಹತ್ತಾರು ಬಣವೆಗಳು ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ.‌

ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಉತ್ತಂಗಿ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ತಗುಲಿ ಹತ್ತಾರು ಬಣವೆಗಳು ಸುಟ್ಟು ಕರಕಲಾದ ಘಟನೆ ನಡೆದಿದೆ.‌ ಒಂದು ಬಣವೆಯಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಕೆಲವೆ ಕ್ಷಣದಲ್ಲಿ ಹತ್ತಾರು ಬಣವೆಗಳು ಸುಟ್ಟು ಕರಕಲಾಗಿವೆ.‌

Home add -Advt

ಭತ್ತದ ಹುಲ್ಲು, ಶೇಂಗಾ ಹೊಟ್ಟು, ತೊಗರಿ ಹೊಟ್ಟು, ಜೋಳದ ಮೇವು ಬಣವೆಗಳು ಕರಕಲಾಗಿವೆ. ಇದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಮೇವಿನ ಬಣವೆಗಳು ಸುಟ್ಟು ಕರಕಲಾಗಿದ್ದು, ದನಕರಿಗಳಿಗೆಂದು ರೈತರು ಸಂಗ್ರಹಿಸಿದ್ದ ಮೇವು ಬೆಂಕಿಗೆ ಆಹುತಿ ಆಗಿದ್ದರಿಂದ ರೈತರು ಕಣ್ಣಿರಿಡುವ ಪರಿಸ್ಥಿತಿ ನಿರ್ಮಾಣ ಆಗಿದೆ.‌

ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ.

Related Articles

Back to top button