CrimeKannada NewsKarnataka NewsLatest

*ಹೆಚ್ಚು ಟಿವಿ ನೋಡಬೇಡ ಎಂದ ತಾಯಿ: ಆತ್ಮಹತ್ಯೆ ಮಾಡಿಕೊಂಡ ಮಗಳು*

ಪ್ರಗತಿವಾಹಿನಿ ಸುದ್ದಿ: ಅತಿಯಾಗಿ ಟಿವಿ ನೋಡಬೇಡ ಎಂದು ಹೇಳಿದ್ದಕ್ಕೆ ಬಾಲಕಿಯೊಬ್ಬಳು ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಈ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಬಸರಿಕಟ್ಟೆಯಲ್ಲಿ ನಡೆದಿದೆ. ಮೃತ ಬಾಲಕಿಯನ್ನು ಸುಪ್ರಿತಾ ಎಂದು ಗುರುತಿಸಲಾಗಿದೆ. ಮೃತ ಬಾಲಕಿ ದಿನನಿತ್ಯ ಟಿವಿ ನೋಡುತ್ತಾ ಊಟ ಮಾಡುತ್ತಾ ಇದ್ದಳು. ಈ ಬಗ್ಗೆ ತಾಯಿ ಸದಾ ಹಾಗೆ ಮಾಡಬೇಡ ಎಂದು ಹೇಳುತ್ತಲೇ ಇದ್ದರು, ಆದರೆ ನಿನ್ನೆ ಕೂಡ ಬಾಲಕಿ ಊಟ ಮಾಡುತ್ತಾ ಟಿವಿ ನೋಡುತ್ತಿದ್ದಳು. ಈ ವೇಳೆ ಊಟದ ತಟ್ಟೆ ಕೈಯಿಂದ ಜಾರಿ ಕೆಳಕ್ಕೆ ಬಿದ್ದಿದೆ, ಇದರಿಂದ ಸಿಟ್ಟಾದ ತಾಯಿ ಬೈದು ಟಿವಿ ನೋಡುವುದನ್ನು ಕಡಿಮೆ ಮಾಡು ಎಂದು ಬುದ್ಧಿವಾದ ಹೇಳಿದ್ದಾರೆ. 

Home add -Advt

ತಾಯಿಯ ಈ ಮಾತಿನಿಂದ ತೀವ್ರ ಮನನೊಂದ ಬಾಲಕಿ ಸಿಟ್ಟಿನಲ್ಲಿ ಕೂತಿದ್ದಳು. ಬಳಿಕ ಎಂದಿನಂತೆ ತಾಯಿ ಕೆಲಸಕ್ಕೆ ಹೋದಾಗ ವೇಲ್ ನಿಂದ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 

ಸಂಜೆ ತಾಯಿ ಮನೆಗೆ ಬಂದು ನೋಡಿದಾಗಲೇ ವಿಷಯ ಗೊತ್ತಾಗಿದೆ. ಜಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Related Articles

Back to top button