Latest
ಟಿಎಂಸಿ ನಾಯಕನ ಹತ್ಯೆ; 10 ಜನರ ಸಜೀವ ದಹನ

ಪ್ರಗತಿವಾಹಿನಿ ಸುದ್ದಿ; ಕೋಲ್ಕತ್ತಾ: ಟಿಎಂಸಿ ನಾಯಕನ ಹತ್ಯೆ ಬಳಿಕ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, 10 ಜನರನ್ನು ಸಜೀವ ದಹನ ಮಾಡಿರುವ ಘಟನೆ ಭಿರ್ಭುಮ್ ನಲ್ಲಿ ನಡೆದಿದೆ.
ರಾಮ್ ಪುರಹತ್ ನ ಟಿಎಂಸಿ ಉಪಾಧ್ಯಕ್ಷನ ಹತ್ಯೆ ಬೆನ್ನಲ್ಲೇ 10 ಜನರನ್ನು ಬೆಂಕಿ ಹಚ್ಚಿ ಕೊಲ್ಲಲಾಗಿದೆ. ಕಚೇರಿ ಬಾಗಿಲು ಮುಚ್ಚಿ ಬೆಂಕಿ ಹಚ್ಚಿದ ಟಿಎಂಸಿ ಕಾರ್ಯಕರ್ತರು ಹತ್ತು ಜನರನ್ನು ಜೀವಂತವಾಗಿ ದಹಿಸಿದ್ದಾರೆ
ಉಪಾಧ್ಯಕ್ಷನ ಕೊಲೆಗೆ ಪ್ರತಿಕಾರವಾಗಿ ಹತ್ತು ಜನರನ್ನು ಜೀವಂತವಾಗಿ ದಹಿಸಿದ್ದಾರೆ ಎಂದು ತಿಳಿದುಬಂದಿದೆ.
ವಸತಿ ಸಚಿವ ವಿ.ಸೋಮಣ್ಣ ವಿರುದ್ಧ ಸಮನ್ಸ್ ಜಾರಿ




