
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಸೇರಿ ಹಲವು ಅಧಿಕಾರಿಗಳನ್ನು ವರ್ಗಾಯಿಸಿ ಸರಕಾರ ಆದೇಶ ಹೊರಡಿಸಿದೆ.
ಎಂ.ಸತೀಶ್ ಕುಮಾರ ಬೆಳಗಾವಿ ಎಡಿಸಿಯಾಗಿ ಆಗಮಿಸಲಿದ್ದು, ಅಶೋಕ ದುಡಗುಂಟಿಗೆ ಜಾಗ ತೋರಿಸಿಲ್ಲ. ಬಿ.ಅಭಿಜಿನ್ ಬೈಲಹೊಂಗಲ ಉಪವಿಭಾಗಾಧಿಕಾರಿಯಾಗಲಿದ್ದಾರೆ. ಎಚ್.ಜಿ.ಚಂದ್ರಶೇಖರಯ್ಯ ಚಿಕ್ಕೋಡಿ ಉಪವಿಭಾಗಾಧಿಕಾರಿಯಾಗಲಿದ್ದಾರೆ.
ಚಿಕ್ಕೋಡಿ ಉಪವಿಭಾಗಾಧಿಕಾರಿಯಾಗಿದ್ದ ರವೀಂದ್ರ ಕರಿಲಿಂಗಣ್ಣವರ್ ಹಾವೇರಿಯ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪ ನಿರ್ದೇಶಕರಾಗಿ ವರ್ಗವಾಗಿದ್ದಾರೆ.
ಬಿ.ಮಲ್ಲಿಕಾರ್ಜುನ ಗೋಕಾಕ ನಗರಸಭೆ ಪೌರಾಯುಕ್ತರಾಗಿ ವರ್ಗವಾಗಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ