Kannada NewsKarnataka NewsNational

*ಏರ್ ಶೋ ವೇಳೆ ಡಿಕ್ಕಿ ಹೊಡೆದ ಎರಡು ವಿಮಾನ*

ಪ್ರಗತಿವಾಹಿನಿ ಸುದ್ದಿ: ಏರ್ ಶೋ ವೇಳೆ ನೌಕಾಪಡೆಯ ಎರಡು ಯುದ್ಧ ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿರುವ ಘಟನೆ ಅಮೆರಿಕದ ಐಡಾಹೋದಲ್ಲಿ ನಡೆದಿದೆ.

ಪಶ್ಚಿಮ ಐಡಾಹೊದ ಮೌಂಟೇನ್ ಹೋಮ್ ಏರ್ ಫೋರ್ಸ್ ಬೇಸ್‌ನಲ್ಲಿ ನಡೆದ ‘ಗನ್‌ಫೈಟ‌ರ್ ಸೈಸ್ ಏರ್ ಶೋ’  ಪ್ರದರ್ಶನದ ವೇಳೆ ಈ ಭೀಕರ ದುರಂತ ಸಂಭವಿಸಿದೆ.ಈ ಘಟನೆಯಲ್ಲಿ ಅದೃಷ್ಟವಶಾತ್ ಎರಡು ವಿಮಾನಗಳ ನಾಲ್ಕೂ ಸಿಬ್ಬಂದಿ ಸುರಕ್ಷಿತವಾಗಿ ಪಾರಾಗಿದ್ದಾರೆ.

ವಾಷಿಂಗ್ಟನ್‌ ವಿಡ್ಡೆ ದ್ವೀಪದ ಎಲೆಕ್ಟ್ರಾನಿಕ್ ಅಟ್ಯಾಕ್ ಸ್ಕಾಡ್ರನ್ 129 ಗೆ ಸೇರಿದ ಎರಡು EA18-G ಗೌಲರ್ಸ್‌ (EA18-G Growlers) ಜೆಟ್‌ಗಳು ಅಪಘಾತಕ್ಕೀಡಾಗಿವೆ. ಆಕಾಶದಲ್ಲಿ ಸಾಹಸ ಪ್ರದರ್ಶನ ನೀಡುತ್ತಿದ್ದಾಗ ಎರಡು ವಿಮಾನಗಳು ಅತಿ ಹತ್ತಿರ ಬಂದು ಪರಸ್ಪರ ಡಿಕ್ಕಿ ಹೊಡೆದವು.

ತಕ್ಷಣವೇ ವಿಮಾನದಲ್ಲಿದ್ದ ನಾಲ್ಕು ಪೈಲಟ್‌ಗಳು ಸುರಕ್ಷಿತವಾಗಿ ಎಜೆಕ್ಟ್  ಆಗಿದ್ದು ಪ್ಯಾರಾಚೂಟ್ ಸಹಾಯದಿಂದ ಕೆಳಗೆ ಇಳಿದಿದ್ದಾರೆ.

ಸುರಕ್ಷತೆಯ ದೃಷ್ಟಿಯಿಂದ ಏರ್ ಶೋದ ಉಳಿದ ಎಲ್ಲಾ ಪ್ರದರ್ಶನಗಳನ್ನು ರದ್ದುಗೊಳಿಸಲಾಗಿದೆ. ಪ್ರಸ್ತುತ ಘಟನಾ ಸ್ಥಳಕ್ಕೆ ತುರ್ತು ರಕ್ಷಣಾ ತಂಡಗಳು ಧಾವಿಸಿದ್ದು ಅಪಘಾತಕ್ಕೆ ನಿಖರ ಕಾರಣ ಏನೆಂಬುದರ ಬಗ್ಗೆ ತನಿಖೆ ಆರಂಭಿಸಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button