Belagavi NewsBelgaum NewsKannada NewsKarnataka NewsLatest

ಬೆಳಗಾವಿಯಲ್ಲಿ ಅಬ್ಬರಿಸಿದ ಅನಿರೀಕ್ಷಿತ ಮಳೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಂಗಳವಾರ ಮಧ್ಯರಾತ್ರಿಯ ನಂತರ ಬೆಳಗಾವಿಯಲ್ಲಿ ಇದ್ದಕ್ಕಿದ್ದಂತೆ ಮಳೆ ಅಬ್ಬರಿಸಿದೆ.

ಬೆಳಗಾವಿಯ ದಕ್ಷಿಣ ಭಾಗ ಸೇರಿದಂತೆ ಅನೇಕ ಕಡೆ ರಾತ್ರಿ 1 ಗಂಟೆ ಹೊತ್ತಿಗೆ ಏಕಾ ಏಕಿ ಮಳೆ ಆರಂಭವಾಯಿತು. ಅನಿರೀಕ್ಷಿತ ಮಳೆಯಿಂದಾಗಿ ರಾತ್ರಿ ಪಾಳಿ ಕೆಲಸಗಾರರು ಸೇರಿದಂತೆ ವಿವಿಧ ಕೆಲಸಗಳಲ್ಲಿ ತೊಡಗಿದ್ದವರು ತೊಂದರೆ ಅನುಭವಿಸುವಂತಾಯಿತು.

ಗುಡುಗು, ಸಿಡಿಲು ಯಾವುದೂ ಇಲ್ಲದೆ ಒಂದೇ ಬಾರಿಗೆ ಮಳೆ ಜೋರಾಗಿ ಸುರಿಯತೊಡಗಿತು. ಮಂಗಳವಾರ ಸಂಜೆ ಸ್ವಲ್ಪ ಮೋಡ ಕವಿದಿತ್ತಾದರೂ ರಾತ್ರಿ ಮಳೆಯ ನಿರೀಕ್ಷೆ ಇರಲಿಲ್ಲ. ಸುಮಾರು ಅರ್ಧ ಗಂಟೆ ಕಾಲ ಜೋರಾಗಿ ಸುರಿದ ಮಳೆ ನಂತರವೂ ಸಣ್ಣ ಪ್ರಮಾಣದಲ್ಲಿ ಬರುತ್ತಲೇ ಇತ್ತು.

ಹಲವೆಡೆ ಈ ಸಂದರ್ಭದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button