Latest

*ಬಹುಮತದತ್ತ ಕಾಂಗ್ರೆಸ್; ಶಾಸಕರಿಗೆ ಬೆಂಗಳೂರಿಗೆ ಆಹ್ವಾನ; ಹೊರ ರಾಜ್ಯಕ್ಕೆ ಶಿಫ್ಟ್ ಸಾಧ್ಯತೆ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನಸಭಾ ಚುನಾವಣೆ ಮತ ಎಣಿಕೆ ಮುಂದುವರೆದಿದ್ದು, ಈ ನಡುವೆ ಕಾಂಗ್ರೆಸ್ ಮ್ಯಾಜಿಕ್ ಸಂಖ್ಯೆ ದಾಟಿದ್ದು ಇದರ ಬೆನ್ನಲ್ಲೇ ಕೈ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ರಣತಂತ್ರ ಹೆಣೆಯಲಾಗಿದೆ.

ಗೆದ್ದ ಎಲ್ಲಾ ಶಾಸಕರನ್ನು ಇಂದು ರಾತ್ರಿಯೇ ಬೆಂಗಳೂರಿಗೆ ಕರೆ ತರುವಂತೆ ಕಾಂಗ್ರೆಸ್ ಪದಾಧಿಕಾರಿಗಳಿಗೆ ಸೂಚಿಸಲಾಗಿದೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಸಭೆ ನಡೆಯಲಿದ್ದು, ಬಳಿಕ ಎಲ್ಲಾ ಶಾಸಕರನ್ನು ರಾಜಸ್ಥಾನಕ್ಕೆ ಶಿಫ್ಟ್ ಮಾಡಲು ಯೋಜನೆ ರೂಪಿಸಲಾಗಿದೆ.

Related Articles

ಶಾಸಕರನ್ನು ಭದ್ರವಾಗಿಟ್ಟುಕೊಳ್ಳಲು ರಾಜಸ್ಥಾನದ ಉದಯಪುರದಲ್ಲಿರುವ ಹೋಟೆಲ್ ಗೆ ಎಲ್ಲಾ ಶಾಸಕರನ್ನು ಕರೆದೊಯ್ಯಲು ಸಿದ್ಧತೆ ನಡೆದಿದೆ ಎಂದು ತಿಳಿದುಬಂದಿದೆ.

https://pragati.taskdun.com/vidhanasabha-electionvote-countingstart-9/

Home add -Advt

Related Articles

Back to top button