Latest

ಪತ್ನಿ ಅಕ್ರಮ ಸಂಬಂಧ: ಫೇಸ್ ಬುಕ್ ಲೈವ್ ಗೆ ಬಂದು ಆತ್ಮಹತ್ಯೆಗೆ ಶರಣಾದ ಪತಿ

ಪ್ರಗತಿವಾಹಿನಿ ಸುದ್ದಿ; ವಿಜಯಪುರ: ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ನೊಂದ ಪತಿಯೊಬ್ಬ ಫೇಸ್ ಬುಕ್ ಲೈವ್ ಗೆ ಬಂದು ಆತ್ಮಹತ್ಯೆಗೆ ಶರಣಾದ ಘಟನೆ ವಿಜಯಪುರ ಜಿಲ್ಲೆ ತಾಳಿಕೋಟೆಯ ಬೊಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.

ವೆಂಕಟೇಶ್ ದ್ವಾರನಹಳ್ಳಿ (25) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ವೆಂಕಟೇಶ್ ಪತ್ನಿ ಆತನ ದಾಯಾದಿ ಸಹೋದರ ಶ್ರೀಶೈಲ್ ಎಂಬುವವನ ಜೊತೆ ಅಕ್ರಮ ಸಂಬಂಧ ಹೊಂದಿದ್ದಲ್ಲದೇ ಆತನೊಂದಿಗೆ ವಾಸವಾಗಿದ್ದಳು. ಇದನ್ನು ಕಂಡ ವೆಂಕಟೇಶ್ ತಾಳಿಕೋಟೆ ಠಾಣೆಯಲ್ಲಿ ದೂರು ನೀಡಿದ್ದ. ಆದರೆ ಪತ್ನಿ ತಾನು ಗಂಡನೊಂದಿಗೆ ವಾಸಿಸಲ್ಲ, ಪ್ರಿಯಕರ ಶ್ರೀಶೈಲ್ ಜೊತೆಯೇ ಇರುವುದಾಗಿ ಹೇಳಿಕೆ ಕೊಟ್ಟಿದ್ದಳು.

Home add -Advt

ಘಟನೆಯಿಂದ ಬೇಸತ್ತ ವೆಂಕಟೇಶ್ ಫೇಸ್ ಬುಕ್ ಲೈವ್ ಗೆ ಬಂದು ಬೇಸರ ತೋಡಿಕೊಂಡು ಆತ್ಮಹತ್ಯೆಗೆ ಶರಣಾಗುತ್ತಿರುವುದಾಗಿ ಹೇಳಿದ್ದಾನೆ. ಫೇಸ್ ಬುಕ್ ವಿಡಿಯೋ ನೋಡಿದ ವೆಂಕಟೇಶ್ ಸ್ನೇಹಿತರು ತಕ್ಷಣ ಆತನ ಮನೆ ಬಳಿ ಬಂದು ಹುಡುಕಿದ್ದಾರೆ. ಅಷ್ಟೊತ್ತಿಗಾಗಲೇ ವೆಂಕಟೇಶ್ ತನ್ನ ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಮಹಿಳಾ ಪೊಲೀಸ್ ಪೇದೆಗಳಿಗೆ ಸರ್ಕಾರದಿಂದ ಗುಡ್ ನ್ಯೂಸ್

ಗೋಬಿ ಮಂಚೂರಿ ಆಸೆ ತೋರಿಸಿ ಅಪ್ರಾಪ್ತೆ ಮೇಲೆ ನೀಚ ಕೃತ್ಯ

Related Articles

Back to top button