Kannada NewsKarnataka NewsLatest

*ವಾಟರ್ ಟ್ಯಾಂಕ್ ಬಿದ್ದು ಇಬ್ಬರು ಸ್ಥಳದಲ್ಲೇ ದುರ್ಮರಣ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಾಟರ್ ಟ್ಯಾಂಕ್ ಬಿದ್ದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಿನ ಶಿವಾಜಿನಗರದಲ್ಲಿ ನಡೆದಿದೆ.

ಎರಡು ಅಂತಸ್ಥಿನ ಮೇಲೆ ಇದ್ದ ವಾಟರ್ ಟ್ಯಾಂಕ್ ಇದಾಗುದ್ದು, ಟ್ಯಾಂಕ್ ಉರುಳಿ ಬಿದ್ದು ದುರಂತ ಸಂಭವಿಸಿದೆ. ನೀರು ತುಂಬಿದ್ದ ಸಿಂಟ್ಯಾಕ್ಸ್ ನಿಂದ ನೀರು ಲೀಕ್ ಆಗಿ ಗೋಡೆ ಶಿಥಿಲಗೊಂಡಿದೆ. ಇದರಿಂದ ಗೋಡೆ ಸಮೇತ ಟ್ಯಾಂಕ್ ಕುಸಿದಿದ್ದು, ಕಟ್ಟಡದ ಬಳಿ ಇದ್ದ ಅಂಗಡಿಯ ಮೇಲೆ ಬಿದ್ದಿದೆ. ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಅಂಗಡಿಗೆ ಬಂದಿದ್ದ ಇಬ್ಬರಲ್ಲಿ ಓರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನೋರ್ವನಿಗೆ ಸಣ್ಣಪುಟ್ಟ ಗಾಯಗಳಾಗಿವೆ.

Home add -Advt

ಶಿವಾಜಿನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶಿವಾಜಿನಗರ ಬಸ್ ನಿಲ್ದಾಣದ ಬಳಿಯ ಓಕ್ ಫರ್ನೀಚರ್ ಮಳಿಗೆಯ ಮೇಲೆ ಇದ್ದ ವಾಟರ್ ಟ್ಯಾಂಕ್ ಬಿದ್ದು ಈ ದುರಂತ ಸಂಭವಿಸಿದೆ ಎಂದು ಪೊಲಿಸ್ ಅಧಿಕಾರಿಗಳು ತಿಳಿಸಿದ್ದಾರೆ.


Related Articles

Back to top button