Latest

ರಾಜಭವನಕ್ಕೆ ತೆರಳಿದ ಯಡಿಯೂರಪ್ಪ; ಶಾಸಕರೆಲ್ಲ ಏರ್ ಪೋರ್ಟ್ ನಿಂದ ವಾಪಸ್

ರಾಜಭವನಕ್ಕೆ ತೆರಳಿದ ಯಡಿಯೂರಪ್ಪ; 

ಶಾಸಕರೆಲ್ಲ ಏರ್ ಪೋರ್ಟ್ ನಿಂದ ವಾಪಸ್

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –

ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿ ಇಂದೇ     ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.

Home add -Advt

ಇದೀಗ ಅವರು ರಾಜಭವನಕ್ಕೆ ತೆರಳಿದ್ದು, ರಾಜ್ಯಪಾಲರ ಬಳಿ ಹಕ್ಕು ಮಂಡಿಸಲಿದ್ದಾರೆ. ಅವರೊಬ್ಬರೇ ಇಂದು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.

ಬಿಜೆಪಿ ಸರಕಾರ ರಚನೆಗೆ ಹೈಕಮಾಂಡ್ ಅನುಮತಿ ನೀಡಲು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆಯಷ್ಟೆ ಶಾಸಕರಿಗೆಲ್ಲ ತಮ್ಮ ತಮ್ಮ ಊರಿಗೆ ಮರಳಲು ಸೂಚನೆ ನೀಡಲಾಗಿತ್ತು. ಬಹುಕತೇಕ ಶಾಸಕರು ಊರಿಗೆ ಮರಳಲು ಏರ್ಪೋರ್ಟ್ ನತ್ತ ಹೊರಟಿದ್ದರು.

ಆದರೆ ಅಷ್ಟರಲ್ಲಾಗಲೇ ಅವರಿಗೆಲ್ಲ ವಾಪಸ್ ಬರುವಂತೆ ಸೂಚನೆ ಬಂದಿದೆ. ಹಾಗಾಗಿ ಶಾಸಕರು ವಿಮಾನ ನಿಲ್ದಾಣದಿಂದ ವಾಪಸ್ ಯಡಿಯೂರಪ್ಪ ನಿವಾಸಕ್ಕೆ ಆಗಮಿಸುತ್ತಿದ್ದಾರೆ.

ಇದನ್ನೂ ಓದಿ –

ಇಂದೇ ಯಡಿಯೂರಪ್ಪ ಪ್ರಮಾಣವಚನ

 

Related Articles

Back to top button