Latest

ವಿಧಾನಸಭೆಯಲ್ಲಿ ಯಡಿಯೂರಪ್ಪ ರಕ್ಷಣಾತ್ಮಕ ಆಟ

ವಿಧಾನಸಭೆಯಲ್ಲಿ ಯಡಿಯೂರಪ್ಪ ರಕ್ಷಣಾತ್ಮಕ ಆಟ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –

ಬಿ.ಎಸ್.ಯಡಿಯೂರಪ್ಪ ನೇತೃತ್ವದ ಭಾರತೀಯ ಜನತಾಪಾರ್ಟಿ ವಿಧಾನಸಭೆಯಲ್ಲಿ ಇಂದು ವಿಶ್ವಾಸಮತ ಗೆದ್ದಿದೆ.

ಧ್ವನಿಮತದ ಮೂಲಕ ವಿಶ್ವಾಸಮತ ಗೆಲ್ಲುವಲ್ಲಿ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ.

ಇದಕ್ಕೂ ಮೊದಲು ವಿಶ್ವಾಸ ಮಂಡಿಸಿದ ಯಡಿಯೂರಪ್ಪ, ದಕ್ಷ ಆಡಳಿತದ ಮೂಲಕ ಎಲ್ಲರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗುತ್ತೇನೆ ಎಂದು ಭರವಸೆ ನೀಡಿದರು.

ಈ ಹಿಂದೆ ಆಡಳಿತ ನಡೆಸಿದ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ದ್ವೇಷದ ರಾಜಕಾರಣ ಮಾಡಲಿಲ್ಲ. ನಾನು ಕೂಡ ಯಾವುದೇ ರೀತಿಯ ದ್ವೇಷದ ರಾಜಕಾರಣ ಮಾಡುವುದಿಲ್ಲ. ಆದರೆ ರಾಜ್ಯದಲ್ಲಿ ಕುಸಿದುಹೋಗಿರುವ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಕೆಲಸ ಮಾಡುತ್ತೇನೆ ಎಂದು ಹೇಳುವ ಮೂಲಕ ರಕ್ಷಣಾತ್ಮಕ ಆಟಕ್ಕೆ ಮುನ್ನುಡಿ ಬರೆದರು.

ನಂತರ ಮಾತನಾಡಿದ ಸಿದ್ದರಾಮಯ್ಯ, ಯಡಿಯೂರಪ್ಪ ಮುಖ್ಮಂತ್ರಿಯಾಗಿರುವುದು ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಆದರೆ ಅವರನ್ನು ನಾನು ಅಭಿನಂದಿಸುತ್ತೇನೆ ಎಂದು ಹೇಳಿದರು.

ಕುಮಾರಸ್ವಾಮಿ ಮಾತನಾಡಿ, ಆಡಳಿತ ಯಂತ್ರ ಕುಸಿದಿದೆ ಎಂದು ಯಡಿಯೂರಪ್ಪ ಹೇಳಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಸುಮ್ಮನೆ ಹೀಗೆ ಹೇಳುವ ಬದಲು ಅದನ್ನು ದಾಖಲೆ ಸಹಿತ ಹೇಳಲಿ ಎಂದು ಸವಾಲೆಸೆದರು. ತಾವು ಅಧಿಕಾರದ ಕೊನೆಯ ದಿನ ಜಾರಿಗೆ ತಂದಿರುವ ಋಣಮುಕ್ತ ಕಾಯ್ದೆ ಕುರಿತು ಅವರು ವಿವರಿಸಿದರು.

ನಂತರ ಎ.ಟಿ.ರಾಮಸ್ವಾಮಿ ಮಾತನಾಡಲು ಎದ್ದು ನಿಂತಾಗ ಸ್ಪೀಕರಿ, ನನಗೆ ಜೈಪಾಲ ರೆಡ್ಡಿ ಅವರ ಅಂತ್ಯಸಂಸ್ಕಾರಕ್ಕೆ ಹೋಗಬೇಕಿರುವುದರಿಂದ ಇಂದು ಎಲ್ಲರಿಗೂ ಮಾತನಾಡುವುದು ಬೇಡ ಎಂದು ವಿನಂತಿಸಿದರು.

ನಂತರ ವಿಶ್ವಾಸಮತವನ್ನು ಅಂಗೀಕರಿಸಲಾಯಿತು. ಇದೇ ವೇಳೆ ಮುಂದಿನ ಮೂರು ತಿಂಗಳ ಧನವಿನಿಯೋಗ ಮಸೂಧೆಯನ್ನು ಸಹ ಸದನ ಅಂಗೀಕರಿಸಿತು.

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button