ಮುಂಬೈ: ಭಾರತ ರತ್ನ, ಗ್ಯಾತ ಗಾಯಕಿ ಲತಾ ಮಂಗೇಶ್ಕರ್ ಇನ್ನಿಲ್ಲ ಎಂಬುದೇ ಕೋಟ್ಯಂತರ ಅಭಿಮಾನಿಗಳಿಗೆ ಆಘಾತ ತಂದಿದೆ. ಗಾನ ಕೋಗಿಲೆಯ ಸ್ವರ ಮಾಧುರ್ಯಕ್ಕೆ, ಹಾಡಿನ ಮೋಡಿಗೆ ತಲೆಬಾಗದವರೇ ಇಲ್ಲ. ತಮ್ಮ 13ನೇ ವಯಸ್ಸಿಗೆ ಚಿತ್ರರಂಗದಲ್ಲಿ ಗಾಯನ ಆರಂಭಿಸಿದ ಲತಾ ಮಂಗೇಶ್ಕರ್ 36 ಭಾಷೆಗಳಲ್ಲಿ, 50 ಸಾವಿರಕ್ಕು ಅಧಿಕ ಹಾಡುಗಳಿಗೆ ಧ್ವನಿಯಾಗಿದ್ದಾರೆ.
ಭಜನೆ, ಭಕ್ತಿ ಗೀತೆ, ದೇಶ ಭಕ್ತಿಗೀತೆ, ಚಿತ್ರಗೀತೆ, ರೋಮ್ಯಾಂಟಿಕ್ ಗೀತೆಗಳಿಗೆ ದ್ವನಿಯಾಗಿರುವ ಲತಾ ಅವರ ಕಂಠ ಸಿರಿಯಲ್ಲಿ ಮೂಡಿಬರದ ಹಾಡುಗಳೆ ಇಲ್ಲ. ಯೂಟ್ಯೂಬ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಗಾನ ಕೋಗಿಲೆ ಹಾಡಿರುವ ಜನಪ್ರಿಯ ಹಾಡಿಗಳು ಅತಿ ಹೆಚ್ಚು ವೀಕ್ಷಣೆ ಪಡೆದಿವೆ. ಜಗತ್ತಿನಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಲತಾ ಮಂಗೇಶ್ಕರ್ ಟ್ವಿಟರ್ ನಂತಹ ಫ್ಲಾಟ್ ಫಾರ್ಮ್ ನಲ್ಲಿ 14.9 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದಾರೆ.
ಯೂಟೂಬ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಲತಾ ಅವರ ಜನಪ್ರಿಯ ಹಾಡಿಗಳು ಕೋಟ್ಯಂತರ ಅಭಿಮಾನಿಗಳ ವೀಕ್ಷಣೆ ಪಡೆದಿವೆ. ಲಗ್ ಜಾ ಗಲೆ ಹಾಡು 22,19,86,310 ವೀವರ್ಸ್ ಹೊಂದಿದ್ದರೆ, ದಿದಿ ತೇರಾ ದೇವರ್ ದೀವಾನ… ಹಾಡು 23,41,31,958ಕ್ಕೂ ಅಧಿಕ ವೀಕ್ಷಣೆ ಪಡೆದಿದೆ. ಕಬೂತರ್ ಜಾ ಜಾ ಜಾ.. ಹಾಡು 15,01,71,598 ವೀಕ್ಷಕರನ್ನು ಸೆಳೆದಿದೆ. ಹೀಗೆ ಸ್ವರ ಸ್ವಾಮ್ರಾಜ್ಯದಲ್ಲಿ ತಮ್ಮದೇ ಛಾಪು ಮೂಡಿಸಿದ ಲತಾ ಮಂಗೇಶ್ಕರ್ ಸಂಗೀತ ಲೋಕದಲ್ಲಿ ಸಾಗಿ ಬಂದ ದಾರಿಯೇ ರೋಚಕ..
1948ರಲ್ಲಿ ಲತಾ ಮಂಗೇಶ್ಕರ್ ಅವರ ಧ್ವನಿ ಸರಿಯಿಲ್ಲ, ಅವರ ಧ್ವನಿ ತುಂಬಾ ತಿಳಿಯಾಗಿದೆ. ಈಕೆಯಿಂದ ಹಾಡಿಸಲು ಸಾಧ್ಯವಿಲ್ಲ ಎಂದು ನಿರ್ಮಾಪಕ ಸಶುಧರ್ ಮುಖರ್ಜಿ ಅವರಿಂದ ತಿರಸ್ಕರಿಸಲ್ಪಟ್ಟಿದ್ದ ಧ್ವನಿ, ಮುಂದೊಂದು ದಿನ ಭಾರತದ ಗಾನ ಕೋಗಿಲೆಯಾಗಿ ಖ್ಯಾತಿ ಪಡೆದಿದ್ದು ಅವರ ಶ್ರದ್ಧೆ, ಛಲಕ್ಕೆ ಪ್ರತಿಯೊಬ್ಬರಿಗೂ ಸ್ಫೂರ್ತಿ ನೀಡುತ್ತದೆ.
ತಮ್ಮ ಧ್ವನಿ ತಿರಸ್ಕರಿಸಿದ್ದ ನಿರ್ಮಾಪಕರಿಗೆ ಸವಾಲು ಹಾಕಿದ್ದ ಲತಾ, ಯಾವ ಧ್ವನಿ ತಿರಸ್ಕರಿಸಿದ್ದಿರೋ ಅದೇ ಧ್ವನಿ ಬಳಿ ಮುಂದೊಂದು ದಿನ ನಿರ್ದೇಶಕ, ನಿರ್ಮಾಪಕರು ಕಾಲಿಗೆ ಬೀಳುತ್ತಾರೆ, ಹಾಡಿಗಾಗಿ ಅಂಗಲಾಚುತ್ತಾರೆ ಎಂದು ಹೇಳಿ ಬಂದಿದ್ದರಂತೆ. ಆ ಮಾತು ಮುಂದೆ ನಿಜವಾಗಿದ್ದೇ ರೋಚಕ ಸಂಗತಿ. 1948ರಲ್ಲಿ ಲತಾ ಮಂಗೇಶ್ಕರ್ ಮಜ್ಬೂರ್ ಚಿತ್ರದಲ್ಲಿ ಹಾಡಿದ ದಿಲ್ ಮೇರಾ ತೋಡಾ.. ಮುಝೆ ಕಹಿ ಕಾ ನಾ ಚೋಡಾ ಎಂಬ ಗೀತೆ ಲತಾ ಅವರ ಜನಪ್ರಿಯತೆ, ಯಶಸ್ಸಿನ ನಾಗಾಲೋಟಕ್ಕೆ ಕಾರಣವಾಗುತ್ತೆ. ಸಂಗೀತ ಸರಸ್ವತಿಯನ್ನು ಒಲಿಸಿಕೊಳ್ಲುವುದು ಎಂದರೆ ಸಾಮಾನ್ಯವೇ? ಹಾಡೆಂದರೆ ಭಕ್ತಿ, ಶ್ರದ್ಧೆಯನ್ನು ಹೊಂದಿದ್ದ ಲತಾ ಮಂಗೇಶ್ಕರ್, ಹಾಡುವಾಗ ಎಂದಿಗೂ ಪಾದರಕ್ಷೆ ಹಾಕಿಕೊಳ್ಳುತ್ತಿರಲಿಲ್ಲವಂತೆ. 50 ವರ್ಷಗಳ ಕಾಲ ನಿರ್ಗಳವಾಗಿ ತಮ್ಮ ಕಂಠಸಿರಿಯಿಂದಲೇ ಕೇಳುಗರನ್ನು ಮೂಕವಿಸ್ಮಿತಗೊಳಿಸಿದ್ದರು.
ಪಂಚಭೂತಗಳಲ್ಲಿ ಲೀನರಾದ ಗಾನ ಕೋಗಿಲೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ