Latest

*ಮನೆಯ ಮಹಡಿಯಿಂದ ಬಿದ್ದು ಮಹಿಳಾ ಅಧಿಕಾರಿಯ ಪುತ್ರಿ ಸಾವು*

ಪ್ರಗತಿವಾಹಿನಿ ಸುದ್ದಿ: ಅಪಾರ್ಟ್ ಮೆಂಟ್ ನಿಂದ ಬಿದ್ದು ಮಹಿಳಾ ಅಧಿಕಾರಿಯೊಬ್ಬರ ಮಗಳು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಚಂದ್ರಾ ಲೇಔಟ್ ವ್ಯಾಪ್ತಿಯಲ್ಲಿ ನಡೆದಿದೆ.

ಅಪಾರ್ಟ್ ಮೆಂಟ್ ನ ಎರಡನೇ ಮಹಡಿಯಿಂದ ಬಿದ್ದು ಯುವತಿ ಸಾವನ್ನಪ್ಪಿದ್ದಾರೆ. ಮೃತ ಯುವತಿ ಆರ್ ಟಿಓ ಜಂಟಿ ಆಯುಕ್ತೆ ಶೋಭಾ ಅವರ ಮಗಳು ಎಂದು ತಿಳಿದುಬಂದಿದೆ.

ಇದು ಆತ್ಮಹತ್ಯೆಯೋ ಅಥವಾ ಆಕಸ್ಮಿಕವಾಗಿ ಸಂಭವಿಸಿರುವ ಸಾವೋ? ಎಂಬ ಅನುಮಾನ ವ್ಯಕ್ತವಾಗಿದ್ದು, ಚಂದ್ರಾ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.


Related Articles

Back to top button