Latest

ಅಂಗವಿಕಲತೆ ಶಾಪವಲ್ಲ -ಶಾಸಕ ದೊಡಗೌಡರ

 

 

 

ಪ್ರಗತಿವಾಹಿನಿ ಸುದ್ದಿ, ಚನ್ನಮ್ಮನ ಕಿತ್ತೂರು
ಕೇಂದ್ರ ಹಾಗೂ ರಾಜ್ಯ ಸರಕಾರಗಳ ಯೋಜನೆಗಳನ್ನು ಪಡೆಯುವ ಮೂಲಕ ವಿಕಲಚೇತನರು ಸಮಾಜದಲ್ಲಿ ಏಳಿಗೆ ಹೊಂದಬೇಕು ಎಂದು ಶಾಸಕ ಮಹಾಂತೇಶ ದೊಡಗೌಡರ ಹೇಳಿದರು.
ಪಟ್ಟಣದ ಗುರುವಾರ ಪೇಟೆಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ವಿಕಲಚೇತನ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಕಲಾಂಗರಿಗೆ ಸರಕಾರದಿಂದ ಆಶ್ರಯ ಮನೆಗಳನ್ನು ನೀಡಲಾಗಿದ್ದು, ಅದರ ಸದುಪಯೋಗ ಪಡೆದುಕೊಳ್ಳಬೇಕು. ಪ್ರತಿಯೊಬ್ಬ ವಿಕಲಚೇತನರಲ್ಲಿ ಅವರದೆ ಆದ ಕಲೆ ಇರುತ್ತದೆ. ಆದರಿಂದ ಅಂಗವಿಕಲತೆ ಶಾಪವಲ್ಲ. ನೂರಾರು ವಿಕಲಚೇತನರು ಸಾಧನೆ ಮಾಡಿದ್ದಾರೆ. ಅಗತ್ಯವಾದ ಸಾಧನ ಸಲಕರಣೆಗಳನ್ನು ಒದಗಿಸಿಕೊಡಲಾಗುವುದು ಎಂದು ಹೇಳಿದರು.
ತಾ.ಪಂ.ಅಧ್ಯಕ್ಷೆ ಶೈಲಾ ಸಿದ್ರಮನಿ ಮಾತನಾಡಿ, ವಿಕಲಚೇತನರನ್ನು ನಿರ್ಲಕ್ಷಿಸುವುದು ಸರಿಯಲ್ಲ. ಅವರನ್ನು ಪ್ರೋತ್ಸಾಹಿಸಿ ನೈತಿಕ ಬೆಂಬಲ ನೀಡುವ ಅಗತ್ಯವಿದೆ. ಸಾಮನ್ಯ ಮಕ್ಕಳಗಿಂತ ಅವರು ಹೆಚ್ಚು ಚಟುವಟಿಕೆಯಿಂದ ಕೂಡಿರುತ್ತಾರೆ. ಅದನ್ನು ಗುರುತಿಸುವ ಜವಾಬ್ದಾರಿ ಪೋಷಕರು ಮತ್ತು ಶಿಕ್ಷಕರ ಮೇಲೆ ಇರುತ್ತದೆ ಎಂದು ಹೇಳಿದರು.
ನಂತರ ವಿಶ್ವ ವಿಕಲಚೇತನ ದಿನಾಚರಣೆ ಅಂಗವಾಗಿ ಶಾಲೆಯಲ್ಲಿ ಹಮ್ಮಿಕೊಂಡಿದ್ದಕ್ರೀಡಾ ಚುವಟಿಕೆಗಳಿಗೆ ಶಾಸಕ ಮಹಾಂತೇಶ ದೊಡಗೌಡರ ಚಾಲನೆ ನೀಡಿದರು.
ಜಿ.ಪಂ. ಸದಸ್ಯೆ ರಾಧಾ ಕಾದ್ರೋಳ್ಳಿ, ಕ್ಷೇತ್ರ ಶಿಕ್ಷಣಾಧಿಕಾರಿ ವಿಜಯಾ ಬೆನಕಟ್ಟಿ, ಶಿವಶಂಕರ ಹಾದಿಮನಿ ಮಾತನಾಡಿದರು. ಕೆ.ಎಮ್.ಎಫ್ ನಿರ್ದೇಶಕ ಬಸವರಾಜ ಪರವಣ್ಣವರ, ಸಂದಿಪ ದೇಶಪಾಂಡೆ, ಪಪಂ ಸದಸ್ಯ ಕಿರಣ ಪಾಟೀಲ, ಎಮ್.ಎಫ್ ಜಕಾಂತಿ, ಎಸ್.ಎಸ್. ಹಾದಿಮನಿ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button