Latest

ಗ್ರಾಮ ಪಂಚಾಯಲ್ಲಿ ಕುಡುಕನ ರಂಪಾಟ

    ಪ್ರಗತಿವಾಹಿನಿ ಸುದ್ದಿ, ಹಿರೇಬಾಗೇವಾಡಿ
ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ಗ್ರಾಮ  ಪಂಚಾಯತಿ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.
ಬೆಳಗಾವಿ ತಾಲೂಕಿನ ಮುತ್ನಾಳ ಗ್ರಾಮ ಪಂಚಾಯತಿಯಲ್ಲಿ ಘಟನೆ ನಡೆದಿದ್ದು, ಗ್ರಾಮ ಪಂಚಾಯತಿ ಕೆಲಸದಿಂದ ತೆಗೆದುಹಾಕಿದ್ದಕ್ಕೆ ವ್ಯಕ್ತಿಯೋರ್ವ ಕುಡಿದು ಬಂದು ಗಲಾಟೆ ಮಾಡಿ,  ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾನೆನ್ನಲಾಗಿದೆ.
ಗ್ರಾಮ ಪಂಚಾಯಿತಿ ಸಿಬ್ಬಂದಿ ಸಾಗರ ಮಾದಿಗ ಹಲ್ಲೆಯಿಂದ ತೀವ್ರ ಗಾಯಗೊಂಡಿದ್ದಾರೆ. 
ಹಲವು ವರ್ಷಗಳಿಂದ ಮುತ್ನಾಳ ಗ್ರಾಮ ಪಂಚಾಯತಿಯಲ್ಲಿ ಗುತ್ತಿಗೆ ಆಧಾರದ ಮೇಲೆ ವಾಟರಮನ್ ಕೆಲಸ ಮಾಡುತ್ತಿದ್ದ ಈತ ಕೆಲಸದ ವೇಳೆಯೂ ಕುಡಿದು ಬರುತ್ತಿದ್ದ. ಸಾಕಷ್ಟು ಬಾರಿ ಎಚ್ಚರಿಕೆ ನೀಡಲಾಗಿತ್ತು.  ಅಲ್ಲದೆ ಕಳೆದ 3 ತಿಂಗಳಿನಿಂದ ಕೆಲಸಕ್ಕೂ ಬಾರದ್ದರಿಂದ ಕೆಲಸದಿಂದ ತೆಗೆದು ಹಾಕಲಾಗಿತ್ತು. 
ಹಾಗಾಗಿ ಗ್ರಾಮ ಪಂಚಾಯತಿಗೆ ನುಗ್ಗಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ. ಕುಡುಕನನ್ನ ವಶಕ್ಕೆ ಪಡೆದಿರುವ ಹಿರೇಬಾಗೇವಾಡಿ ಪೊಲೀಸರು, ಪರಿಶೀಲನೆ ನಡೆಸುತ್ತಿದ್ದಾರೆ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button