ಪ್ರಗತಿವಾಹಿನಿ ಸುದ್ದಿ,
ಸಿಕ್ಕಿಂನ ಘನಟೋರನಲ್ಲಿ ಗುಡ್ಡ ಕುಸಿದು ಕರ್ನಾಟಕದ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಆಡಿ ಗ್ರಾಮದ ಯೋಧ ಸಾವನ್ನಪ್ಪಿದ ಘಟನೆ ನಡೆದಿದೆ.
ಸೋಮವಾರ ಬೆಳಗಿನ ಜಾವ ಸಿಕ್ಕಿಂನಲ್ಲಿ ಗುಡ್ಡ ಕುಸಿದಿದ್ದರಿಂದ ನಿಪ್ಪಾಣಿ ತಾಲೂಕಿನ ಆಡಿ ಗ್ರಾಮದ 25 ವರ್ಷದ ರೋಹಿತ್ ಸುನೀಲ್ ದೇವರಡೆ ಸಾವನ್ನಪ್ಪಿದ್ದಾರೆ.
ಕಳೆದ ೭ ವರ್ಷದ ಹಿಂದೆ ಸೇನೆಗೆ ಸೇವೆಗೆ ಸೇರಿದ್ದ ರೋಹಿತ್, ASL517 ಬಟಾಲಿಯನ್ ನಲ್ಲಿ ಬೆಂಗಳೂರಿನಲ್ಲಿ ತರಬೇತಿ ಪಡೆದಿದ್ದ. ಇದೆ ತಿಂಗಳ ೯ ನೇ ತಾರೀಕಿಗೆ ರಜೆಯ ಮೇಲೆ ಊರಿಗೆ ಬರಬೇಕಿದ್ದ ರೋಹಿತನ ಮೇಲೆ ವಿಧಿಯು ಅಟ್ಟಹಾಸ ಮೆರೆದಿದೆ.
ನಾಳೆ ಅಥವಾ ನಾಡಿದ್ದು ಬೆಳಗ್ಗೆ ಸ್ವಗ್ರಾಮ ಆಡಿಗೆ ಯೋಧನ ಪಾರ್ಥಿವ ಶರೀರ ಆಗಮಿಸಲಿದೆ. ಯೋಧನ ಸಾವಿನಿಂದ ಸ್ವಗ್ರಾಮ ನೀರವ ಮೌನ ಮಡುಗಟ್ಟಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ