Latest

ಬಿಜೆಪಿ ವಿರುದ್ಧ ಬಂಡಾಯವಿಲ್ಲ -ರಮೇಶ ಕತ್ತಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಚಿಕ್ಕೋಡಿ ಕ್ಷೇತ್ರದ ಟಿಕೆಟ್ ತಪ್ಪಿದ್ದರಿಂದಾಗಿ ನಾನು ಬಿಜೆಪಿ ವಿರುದ್ಧ ಬಂಡಾಯವೇಳುವುದಾಗಿ ಹಬ್ಬಿರುವುದು ಕೇವಲ ವದಂತಿ ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದ್ದಾರೆ.

Home add -Advt

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನರೇಂದ್ರ ಮೋದಿ ನಮ್ಮ ನಾಯಕ. ನಾವೆಲ್ಲ ಸೇರಿ ಚುನಾವಣೆ ಎದುರಿಸುತ್ತೇವೆ. ಚುನಾವಣೆ ಪ್ರಚಾರಕ್ಕೆ ಕಾರ್ಯಯೋಜನೆ ರೂಪಿಸುವುದಕ್ಕಾಗಿ ಯಡಿಯೂರಪ್ಪ ಬಂದಿದ್ದಾರೆಯೇ ವಿನಃ ನಮ್ಮ ಸಮಾಧಾನಪಡಿಸಲು ಅಲ್ಲ ಎಂದರು.

ನಾನು ಟಿಕೆಟ್ ಆಕಾಕ್ಷಿಯಾಗಿದ್ದು ನಿಜ. ನನಗೆ ಟಿಕೆಟ್ ಕೈ ತಪ್ಪಿದ್ದರಿಂದ ಕಾರ್ಯಕರ್ತರಿಗೆ ಅಸಮಾಧಾನವಾಗಿದ್ದೂ ನಿಜ. ಆದರೆ ಅವನ್ನೆಲ್ಲ ಸರಿಪಡಿಸಲಾಗುವುದು ಎಂದು ಕತ್ತಿ ಹೇಳಿದರು. 

Related Articles

Back to top button