Latest

ಹಿಂಡಲಗಾ ಜೈಲಿಂದ ಕೈದಿ ಪರಾರಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಮರಣದಂಡನೆಗೆ ಒಳಗಾಗಿದ್ದ ಕೈದಿಯೊಬ್ಬ ಹಿಂಡಲಗಾ ಜೈಲಿಂದ ಪರಾರಿಯಾಗಿದ್ದಾನೆ.

Home add -Advt

ಏಪ್ರಿಲ್ 22ರಂದೇ ಈ ಘಟನೆ ನಡೆದಿದೆ.

ತಮಿಳುನಾಡಿನ ಮುರುಗನ್ ಎನ್ನುವ ವ್ಯಕ್ತಿ ಪರಾರಿಯಾದಾತ. ಈತ ಚಾಮರಾಜನಗರದಲ್ಲಿ ಐವರನ್ನು ಕೊಚ್ಚಿ ಕೊಂದಿದ್ದ.

ಅಪರಾಧ ಸಾಬೀತಾಗಿದ್ದರಿಂದ, 2017ರಲ್ಲಿ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು.

ಕಬ್ಬಿಣದ ಸರಳುಗಳನ್ನು ಜೋಡಿಸಿ ಅದರ ಸಹಾಯದಿಂದ ಜೈಲಿನ ಕಾಂಪೌಂಡ್ ಹಾರಿ ಈತ ಪರಾರಿಯಾಗಿದ್ದಾನೆ.

ಜೈಲಿನ ಮುಖ್ಯ ಅಧೀಕ್ಷಕ ಟಿ.ಶೇಷ ಕೈದಿ ಪರಾರಿಯಾಗಿರುವುದನ್ನು ಖಚಿತಪಡಿಸಿದ್ದು, ಪೊಲೀಸ್ ದೂರು ದಾಖಲಿಸಲಾಗಿದೆ ಎಂದು ಪ್ರಗತಿವಾಹಿನಿಗೆ ತಿಳಿಸಿದ್ದಾರೆ.

Related Articles

Back to top button